ಬಳ್ಳಾರಿ: ಜಿಂದಾಲ್ ನ ಮಹಿಳಾ ಉದ್ಯೋಗಿಗಳು ಆನ್ಲೈನ್ ಮೂಲಕ ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿದ್ದಾರೆ.
ಕೊರೊನಾ ಸೋಂಕಿನ ಭೀತಿ ನಡುವೆಯೇ ವರಮಹಾಲಕ್ಷ್ಮಿ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿಯೂ ಸಹ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಕೊರೊನಾ ಮಹಾಮಾರಿಯ ನಡುವೆಯೇ ಮಹಿಳೆಯರು ಸಾಮಾಜಿಕ ಕಾಪಾಡಲು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
Advertisement
Advertisement
ಬಳ್ಳಾರಿಯ ತೋರಣಗಲ್ ಸುತ್ತಲಿನ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಹೀಗಾಗಿ ಜಿಂದಾಲ್ ಟೌನ್ ಶಿಪ್ ಬಳಿ ಇರುವ ವಿದ್ಯಾನಗರದ ಜಿಂದಾಲ್ ಉದ್ಯೋಗಿಗಳು ಸೇರಿದಂತೆ ಅವರ ಕುಟುಂಬದ ಮಹಿಳೆಯರು ಆನ್ಲೈನ್ ಪೂಜೆ ಮಾಡಿದ್ದಾರೆ. ವರ ಮಹಾಲಕ್ಷ್ಮಿ ಹಬ್ಬದಲ್ಲಿ ಮಹಿಳೆಯರು ಮನೆ ಮನೆಗೆ ತೆರಳಿ ಮಹಾಲಕ್ಷ್ಮಿ ಆರತಿ ಮಾಡಿ ಉಡಿ ತುಂಬುವ ಕಾರ್ಯ ಮಾಡುವುದು ಸಂಪ್ರದಾಯ. ಕೊರೊನಾದಿಂದಾಗಿ ಎಲ್ಲರೂ ಆನ್ಲೈನ್ ವಿಡಿಯೋ ಕಾಲ್ ಮುಖಾಂತರವಾಗಿ ತಮ್ಮ ತಮ್ಮ ಮನೆಯಿಂದಲೇ ದೇವಿಗೆ ಆರತಿ ಮಾಡಿ ಉಡಿ ತುಂಬಿದ್ದಾರೆ.