ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾಗೆ ಅಂತ್ಯಕಾಲ ಹತ್ತಿರ ಬರುತ್ತಿದೆ. ಚೀನಿ ವೈರಸ್ಗೆ ಈ ವರ್ಷದ ಅಂತ್ಯಕ್ಕೆ ಭಾರತದಲ್ಲಿ ಮೋಕ್ಷ ಸಿಗಲಿದೆ.
2019 ಡಿಸೆಂಬರ್ ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ನಂತರ ಇಡೀ ವಿಶ್ವವನ್ನೇ ಕಿತ್ತು ತಿನ್ನುವ ಕ್ರಿಮಿಯಾಗಿ ಹೊರ ಹೊಮ್ಮಿದೆ. ಈ ಕೊರೊನಾದಿಂದ ಭಾರತವೂ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಒಂದು ಗುಡ್ ನ್ಯೂಸ್ ಸಿಕ್ಕಿದ್ದು, ಟೈಮ್ಸ್ ನೆಟ್ವರ್ಕ್ ಮತ್ತು ಪ್ರೊಟಿವಿಟಿ ದತ್ತಾಂಶ ಸಂಗ್ರಹ ಸಂಸ್ಥೆಯ ಮಾಹಿತಿಯ ಪ್ರಕಾರ ಕೊರೊನಾ ನವೆಂಬರ್ ವೇಳೆಗೆ ಅಂತ್ಯವಾಗಲಿದೆ ಎಂದು ಹೇಳಿದೆ.
Advertisement
Advertisement
ಯಾವ್ಯಾವ ರಾಜ್ಯದಲ್ಲಿ ಯಾವಾಗ ಅಂತ್ಯ?
1. ಕರ್ನಾಟಕದಲ್ಲಿ ಆಗಸ್ಟ್ 16ರ ವೇಳೆಗೆ ಗರಿಷ್ಠವಾಗಿ, ನವೆಂಬರ್ 3ರ ನಂತರ ಕೊರೊನಾ ಮುಕ್ತ.
2. ಮಹಾರಾಷ್ಟ್ರದಲ್ಲಿ ಆಗಸ್ಟ್ 14ರ ವೇಳೆಗೆ ಗರಿಷ್ಠವಾಗಿ, ಅಕ್ಟೋಬರ್ 26ರ ವೇಳೆಗೆ ಕೊನೆ ಸಾಧ್ಯತೆ.
3. ತಮಿಳುನಾಡಿನಲ್ಲಿ ಆಗಸ್ಟ್ 24ರ ವೇಳೆಗೆ ಗರಿಷ್ಠವಾಗಿ, ಅಕ್ಟೋಬರ್ 17ರ ವೇಳೆಗೆ ಕೊನೆ ಸಂಭವ.
4. ದೆಹಲಿ ಸೆಪ್ಟೆಂಬರ್ 22ರ ವೇಳೆಗೆ ಕೊರೋನಾ ಕೊನೆಗೊಳ್ಳುವ ನಿರೀಕ್ಷೆ.
Advertisement
5. ಕೇರಳದಲ್ಲಿ ಆಗಸ್ಟ್ 10ರ ವೇಳೆಗೆ ಗರಿಷ್ಠವಾಗಿ, ಅಕ್ಟೋಬರ್ 15ರ ವೇಳೆಗೆ ಕೊನೆ ಸಾಧ್ಯತೆ.
6. ತೆಲಂಗಾಣದಲ್ಲಿ ಆಗಸ್ಟ್ 15ರ ವೇಳೆಗೆ ಹೆಚ್ಚಾಗಿ ಅಕ್ಟೋಬರ್ 17ರ ವೇಳೆಗೆ ಸೋಂಕು ಕ್ಷೀಣಿಸಬಹುದು.
7. ಉತ್ತರ ಪ್ರದೇಶದಲ್ಲಿ ಆಗಸ್ಟ್ 21ರ ವೇಳೆಗೆ ಏರಿಕೆಯಾಗಿ ಅಕ್ಟೋಬರ್ 15 ರಂದು ಕೊನೆಗೊಳ್ಳಬಹುದು.
8. ರಾಜಸ್ಥಾನದಲ್ಲಿ ಆಗಸ್ಟ್ 15ಕ್ಕೆ ಗರಿಷ್ಠವಾಗಿ, ಅಕ್ಟೋಬರ್ 10ರ ವೇಳೆಗೆ ಸೋಂಕು ಅಂತ್ಯ ಸಾಧ್ಯತೆ.
9. ಆಂಧ್ರ ಪ್ರದೇಶದಲ್ಲಿ ಆಗಸ್ಟ್ 23ರಂದು ಗರಿಷ್ಠಗೊಂಡು, ಅಕ್ಟೋಬರ್ 28 ರಂದು ಸೋಂಕು ಕೊನೆಗೊಳ್ಳಬಹುದು.
10. ಮಧ್ಯ ಪ್ರದೇಶ ಆಗಸ್ಟ್ 13 ರಂದು ಗರಿಷ್ಠಗೊಳ್ಳುವ ನಿರೀಕ್ಷೆ ಇದ್ದು, ಸೆಪ್ಟೆಂಬರ್ 30ರ ವೇಳೆಗೆ ಕೊನೆ ಸಾಧ್ಯತೆ.
11. ಗುಜರಾತ್ನಲ್ಲಿ ಆಗಸ್ಟ್ 14ರಂದು ಉತ್ತುಂಗಕ್ಕೇರಿ, ಅಕ್ಟೋಬರ್ 12ರ ವೇಳೆಗೆ ಅಂತ್ಯವಾಗಬಹುದು.
12. ಪಶ್ಚಿಮ ಬಂಗಾಳದಲ್ಲಿ ಆಗಸ್ಟ್ 12ರಂದು ಗರಿಷ್ಠಗೊಳ್ಳುವ ನಿರೀಕ್ಷೆ ಇದ್ದು, ಅಕ್ಟೋಬರ್ 7ರ ವೇಳೆಗೆ ಕೊನೆಗೊಳ್ಳಬಹುದು.