ಧಾರವಾಡ: ಸೋಂಕು ಹಿನ್ನೆಲೆ ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ತಂದೆ, ಮಗ ಇಬ್ಬರು ಕೊರೊನಾಗೆ ಬಲಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.
Advertisement
ತಂದೆ ರವೀಂದ್ರನಾಥ ವಸ್ತ್ರದ (74) ಮಗ ವಿಶ್ವನಾಥ ವಸ್ತ್ರದ (47) ಮೃತರಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಮಗ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.
Advertisement
Advertisement
ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ತಂದೆ ನಿಧನರಾಗಿದ್ದರೆ. ಇಂದು ಬೆಳಗ್ಗೆ ಮಗ ಸಾವನ್ನಪ್ಪಿದ್ದಾನೆ. ತಂದೆ ಮಗ ಇಬ್ಬರು ಕಿರಾಣಿ ವರ್ತಕರಾಗಿದ್ದರು. ತಂದೆ ರವೀಂದ್ರನಾಥ ಧಾರವಾಡ ಕಿರಾಣಿ ವರ್ತಕ ಸಂಘದ ಕಾರ್ಯದರ್ಶಿಯಾಗಿದ್ದರು. ಮಗ ವಿಶ್ವನಾಥ ಕಿರಾಣಿ ಅಂಗಡಿ ಜೊತೆಗೆ ಹಲವು ಬಿಜಿನೆಸ್ಗಳನ್ನು ಮಾಡಿಕೊಂಡಿದ್ದರು.