– ಫೀಸ್ ಟಾರ್ಚರ್ ವಿರುದ್ಧ ಸಮರ
ಬೆಂಗಳೂರು: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಕೂಲ್ ಫೀಸ್ ಹೆಸರಲ್ಲಿ ವಸೂಲಿಗಿಳಿದಿವೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ದುಪ್ಪಟ್ಟು ಫೀಸನ್ನು ಕಟ್ಟಿಸಿಕೊಳ್ಳುತ್ತಿದ್ದು, ದುಬಾರಿ ಶುಲ್ಕ ಪಾವತಿಸಲಾಗದೇ ಪೋಷಕರು ಕಂಗಲಾಗಿದ್ದಾರೆ.
ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡದೆ, ಹಿಂದಿನ ವರ್ಷದ ಶುಲ್ಕ ಪಡೆಯಲು ಏಪ್ರಿಲ್ 28 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಖಾಸಗಿ ಶಾಲೆಗಳು ಈ ಆದೇಶವನ್ನ ಲೆಕ್ಕಿಸದೆ ಮನಸೋ ಇಚ್ಛೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಶೇ.20, 30, 40, 50ವರೆಗೂ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ಕೊಡುತ್ತಿವೆ.
Advertisement
Advertisement
ಶಾಲೆಗಳು ಇದೀಗ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಕಟ್ಟಬೇಕು ಅಂತ ಮೆಸೇಜ್ ಕಳುಹಿಸುತ್ತಿವೆ. ರಾಜ್ಯದ ಸುಮಾರು ಶೇ.80 ಖಾಸಗಿ ಶಾಲೆಗಳಿಂದ ಸರ್ಕಾರದ ಆದೇಶ ಮೀರಿ ಶುಲ್ಕ ಹೆಚ್ಚಳ ಮಾಡಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಸಾವಿರಾರು ರೂಪಾಯಿ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ನೀಡಲಾಗುತ್ತಿದೆ.
Advertisement
ರಾಜ್ಯದಲ್ಲಿ ಸುಮಾರು 23 ಸಾವಿರ ಖಾಸಗಿ ಶಾಲೆಗಳು ಇವೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 23, 502 ಖಾಸಗಿ ಶಾಲೆಗಳು ಇವೆ. ಬೆಂಗಳೂರಿನಲ್ಲಿ ಸುಮಾರು 6-7 ಸಾವಿರ ಖಾಸಗಿ ಶಾಲೆಗಳಿಗೆವೆ. ಬಹುತೇಕ ಶಾಲೆಗಳು ವಿವಿಧ ರೂಪದಲ್ಲಿ ಮಕ್ಕಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಟ್ಯೂಷನ್ ಫೀಸ್, ಆನ್ಲೈನ್ ಕಂಪ್ಯೂಟರ್ ಫೀಸ್, ಬುಕ್ಸ್, ಸಮವಸ್ತ್ರ, ಲೈಬ್ರರಿ, ಗೇಮ್ ಫೀಸ್ ಅಂತ ಸಾವಿರಾರು ರೂಪಾಯಿ ಶುಲ್ಕವನ್ನು ಹೆಚ್ಚಳ ಮಾಡಿದೆ. ಈ ಕೊರೊನಾ ವರ್ಷದಲ್ಲೂ ಶಾಲೆಗಳ ಮಾತ್ರ ಶುಲ್ಕ ಕಡಿತ ಮಾಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಪೋಷಕರ ಪರದಾಟ:
ಫೀಸ್ ಕಟ್ಟಿಲ್ಲ ಅಂದರೆ ಆನ್ಲೈನ್ ಲಾಗೀನ್ ಐಡಿ ಕೊಡಲ್ಲ ಅಂತಾರೆ, ಎಲ್ಲರಿಗೂ ವರ್ಕ್ ಫ್ರಂ ಇರಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಲಸೋಲ ಮಾಡಿ ಹಣ ಕಟ್ಟುತ್ತಿದ್ದೀವಿ. ಮನೆ ಕಡೆಗೂ ಕಷ್ಟ ಆಗುತ್ತೆ. ಖಾಸಗಿ ಶಾಲೆಗಳು ಮಾಡೋದು ತಪ್ಪು ಎಂದು ಕೆಂಗೇರಿ ನಿವಾಸಿ ಪ್ರಿಯ ಹೇಳಿದ್ದಾರೆ.
ನಾಲ್ಕನೇ ತರಗತಿಗೆ ಒಟ್ಟು 1 ಲಕ್ಷ ಶುಲ್ಕ. ಈಗಾಗಲೇ 60 ಸಾವಿರ ಕಟ್ಟುವಂತೆ ಮಸೇಜ್ ಬಂದಿತ್ತು. ನಾವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೀವಿ. ತಿಂಗಳಲ್ಲಿ ಐದು ದಿನದ ಸಂಬಳ ಕಟ್ ಮಾಡಿದ್ದಾರೆ. ಫೀಸ್ಗೆ ಅಂತಾನೇ ವರ್ಷದಿಂದ ಸೇವ್ ಮಾಡಿಕೊಂಡು ಬಂದಿದ್ದೀವಿ. ಹಾಗಾಗಿ ಅರ್ಧ ಹಣ ವನ್ನು ಕಟ್ಟಿದ್ದೀವಿ. ಆನ್ ಲೈನ್ ಕ್ಲಾಸಸ್ ಅಂತ ಫೀಸ್ ತಗೊಂಡ್ರು. ಅದರಲ್ಲಿ ವಿಷ್ಯೂಯಲ್ಸ್ ಕ್ಲಾರಿಟಿ ಇರಲ್ಲ, ನೆಟ್ವರ್ಕ್ ಇರಲ್ಲ, ಹಳ್ಳಿ ಭಾಗದ ಜನರು ಏನು ಮಾಡಬೇಕು. ಆಗಷ್ಟ್ ಗೆ ಶಾಲೆ ಆರಂಭ ಅಂದರೆ ಅರ್ಧ ವರ್ಷ ಮುಗೀತು. ಆದರೆ ಸ್ಕೂಲ್ನವರು ಪೂರ್ತಿ ಹಣ ತಗೋತಿದ್ದಾರೆ ಎಂದು ಪೋಷಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
ನನ್ನ ಮಗು ಫ್ರೀ ನರ್ಸರಿಗೆ ಹೋಗುತ್ತಿದೆ. ಮೂರು ತಿಂಗಳನಿಂದ ಮೂರು ದಿನಕ್ಕೆ, ವಾರಕ್ಕೆ ಫೀಸ್ ಕಟ್ಟಿ ಅಂತ ಮಸೇಜ್ಗಳು ಬರುತ್ತಿವೆ. ವ್ಯಾನ್ ಫೀಸ್, ಡ್ರೆಸ್ಗೆ ಅಂತ ಮತ್ತೆ ಹಣ ಕೇಳುತ್ತಿದ್ದಾರೆ. ಖಾಸಗಿ ಶಾಲೆಗಳು ಒಂದು ರೂಪಾಯಿ ಕೂಡ ಕಮ್ಮಿ ಮಾಡುತ್ತಿಲ್ಲ. ಸರ್ಕಾರದಿಂದ ವಿನಾಯಿತಿ ಯಾಕೆ ಕೊಡಬೇಕು ಇವರಿಗೆ. ನಮ್ಮ ಕೆಲಸಗಳಿಗೆ ಭದ್ರತೆ ಇಲ್ಲ, ನಮ್ಮ ಬದುಕು ಕೂಡ ಕಷ್ಟ ಆಗಿದೆ ಎಂದು ಯಶವಂತ್ ಹೇಳಿದರು.
ಜನ ಹೊಟ್ಟೆಗೆ ಬಟ್ಟೆಗೆ ಹೊಂದಿಸಿ ಕೊಂಡರೆ ಸಾಕಾಗಿದೆ. ಬಾಡಿಗೆ ಕಟ್ಟುವುದಕ್ಕೆ ಹಣವಿಲ್ಲ. ಇವರಿಗೆ ಎಲ್ಲಿಂದ ಫೀಸ್ ಕಟ್ಟುವುದು. ಕೆಲಸ ಕಾರ್ಯ ಇಲ್ಲದ ವೇಳೆಯಲ್ಲಿ ಇವರು ಹಣ ಕಟ್ಟಿ ಅಂದರೆ ಎಲ್ಲಿ ಕಟ್ಟುವುದು? ಖಾಸಗಿ ಶಾಲೆಗಳು ವಸೂಲಿಗೆ ಇಳಿದಿರೋದು ಸರಿಯಿಲ್ಲ. ಸರ್ಕಾರ ಗಮನ ಹರಿಸಬೇಕು ಎಂದು ಸವಿತಾ ಹೇಳಿದ್ದಾರೆ.