– ಬೆಂಗಳೂರಿನಲ್ಲಿ 9618 ಕೇಸ್ ಪತ್ತೆ
ಬೆಂಗಳೂರು: ಪ್ರತಿ ದಿನವೂ ದಾಖಲೆ ಬರೆಯುತ್ತಿದ್ದ ಕೊರೊನಾ ಇಂದು ಸ್ವಲ್ಪ ಇಳಿಕೆಯಾಗಿದ್ದು, ಒಟ್ಟು 15,785 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 146 ಜನ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 9,618 ಮಂದಿಗೆ ಕೊರೊನಾ ದೃಢಪಟ್ಟಿದ್ದು, 97 ಜನ ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,42,084 ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 84,785 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,76,850 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 10,21,250 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
Advertisement
ಒಟ್ಟು ಇಲ್ಲಿಯವರೆಗೆ 13,497 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 721 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 9,591 ಆಂಟಿಜನ್ ಟೆಸ್ಟ್ 1,13,621 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,23,212 ಟೆಸ್ಟ್ ಮಾಡಲಾಗಿದೆ.
Advertisement
ತುಮಕೂರು 652, ಮೈಸೂರು 568, ಕಲಬುರಗಿ 513, ಹಾಸನ 320, ಬೀದರ್ 318, ವಿಜಯಪುರ 302, ಧಾರವಾಡ 283, ಬಳ್ಳಾರಿ 248 ಮತ್ತು ರಾಯಚೂರಿನಲ್ಲಿ 228 ಮಂದಿಗೆ ಸೋಂಕು ಬಂದಿದೆ. ಒಟ್ಟು 721 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 166, ಕಲಬುರಗಿ 107, ತುಮಕೂರು 69, ಕೋಲಾರ 44, ಮತ್ತು ದಾವಣಗೆರೆಯ 43 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.