– ಜಿಲ್ಲೆಯಲ್ಲಿ ವೈದ್ಯರ ಕೊರತೆ ಹೆಚ್ಚಿದೆ
– ಜಿಲ್ಲೆಗೆ ಬೆಂಗಳೂರಿನಿಂದ ಬಂದವರಿಂದಲೇ ಕಂಟಕ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಮುಂದಿನ 15 ದಿನ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾ ವೈದ್ಯಾಧಿಕಾರಿ ಮೋಹನ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸ್ಫೋಟ ಸಾಧ್ಯತೆ: ಮುಂದಿನ ಹದಿನೈದು ದಿನ ಕೊಡಗಿಗೆ ಕಂಟಕ ಎದುರು ಅಗುತ್ತದೆ. ಕೊಡಗು ಜಿಲ್ಲೆಯಲ್ಲಿರುವ ಜನಸಂಖ್ಯೆ ಸುಮಾರು ಆರೂವರೆ ಲಕ್ಷ. ಆದ್ರೆ ಬೆಂಗಳೂರಿನಿಂದ ಬಂದಿರುವ ಜನರು ಹಳ್ಳಿ ಸೇರಿಕೊಂಡಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಮುಂದಿನ 15 ದಿನ ಎಚ್ಚರಿಕೆಯಿಂದಿರಬೇಕೆಂದು ಮೋಹನ್ ಕುಮಾರ್ ಹೇಳಿದ್ದಾರೆ.
Advertisement
Advertisement
ಜಿಲ್ಲೆಯಲ್ಲಿ ವೈದ್ಯರ ಕೊರತೆ: ಜಿಲ್ಲೆಯಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ಪಿಜಿಷಿಯನ್, ಅನಸ್ತೆಷ್ಟಿಸ್ ಇಲ್ಲವೇ ಇಲ್ಲ. ಇಡೀ ಜಿಲ್ಲೆಗೆ ಇರೋದೆ ಒಬ್ಬರು ಪಿಜಿಷಿಯನ್. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲೂ ವೈದ್ಯರ ಕೊರತೆ ಕಾಡುತ್ತಿದೆ. ಅಷ್ಟೇ ಅಲ್ಲದೇ ಸೋಂಕಿನಿಂದ ಗಂಭೀರವಾಗಿ ಬಳಲುವವರ ಚಿಕಿತ್ಸೆಗೂ ವೈದ್ಯರ ಕೊರತೆ ಹೆಚ್ಚಿದೆ. ಕೋವಿಡ್ ಇಷ್ಟೊಂದು ಹೆಚ್ಚಲು ಬೆಂಗಳೂರಿನಿಂದ ಬಂದವರೇ ಕಾರಣ ಎಂದರು.
Advertisement
Advertisement
ಆಸ್ಪತ್ರೆಗೆ ಬನ್ನಿ: ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ ತಕ್ಷಣವೇ ಆಸ್ಪತ್ರೆಗೆ ಬರುತ್ತಿಲ್ಲ. ತಮ್ಮ ಆರೋಗ್ಯ ಬಿಗಡಾಯಿಸಿದ ಬಳಿಕ ಆಸ್ಪತ್ರೆಗೆ ಬರುತ್ತಿದ್ದಾರೆ. ಅಷ್ಟರಲ್ಲಿ ಇಡೀ ಮನೆಯವರಿಗೆ ಸೋಂಕು ಹರಡಿಸುತ್ತಿದ್ದಾರೆ. ಇದು ಕೊಡಗಿನಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚೋದಕ್ಕೆ ಕಾರಣವಾಗಿದೆ. ಜನರೇ ಎಚ್ಚೆತ್ತುಕೊಳ್ಳದಿದ್ರೆ ಮತ್ತಷ್ಟು ಕಂಟಕ ಜಿಲ್ಲೆಗೆ ಎದುರಾಗಲಿದೆ ಎಂದು ಅತಂಕ ವ್ಯಕ್ತಪಡಿಸಿದರು.