ಬೆಂಗಳೂರು: ಇಂದು ಕರ್ನಾಟಕದಲ್ಲಿ ದಾಖಲೆಯ ಒಟ್ಟು 48,296 ಮಂದಿಗೆ ಕೊರೊನಾ ಬಂದಿದ್ದು, ರಾಜ್ಯಾದ್ಯಂತ ಒಟ್ಟು 217 ಜನ ಕೊರೊನಾಗೆ ಬಲಿಯಾಗಿದ್ದಾರೆ.
Advertisement
ಬೆಂಗಳೂರಿನಲ್ಲಿ ಬರೋಬ್ಬರಿ 26,756 ಮಂದಿಗೆ ಕೊರೊನಾ ದೃಢಪಟ್ಟಿದ್ದು, ನಗರದ 18 ವರ್ಷದ ಯುವಕ ಸೇರಿ ಒಟ್ಟು 93 ಜನ ಬಲಿಯಾಗಿದ್ದಾರೆ. ಬೆಂಗಳೂರಿನ ಬಳಿಕ ಮೈಸೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಕಂಡಿದ್ದು, ಇಂದು 3,500 ಪ್ರಕರಣ ದಾಖಲಾಗಿದೆ.
Advertisement
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 3,82,690ಕ್ಕೆ ಏರಿಕೆ ಕಂಡಿದೆ. ಇಂದು ರಾಜ್ಯದಲ್ಲಿ ಒಟ್ಟು 1,62,011 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,23,142 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 11,24,909 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Advertisement
Advertisement
ಒಟ್ಟು ಇಲ್ಲಿಯವರೆಗೆ 15,523 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಂದು 14,280 ಆಂಟಿಜನ್ ಟೆಸ್ಟ್, 1,75,513 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,89,793 ಕೊರೊನಾ ಪರೀಕ್ಷೆ ಮಾಡಲಾಗಿದೆ.
ತುಮಕೂರು 1,801, ಮಂಡ್ಯ 1,348, ಬಳ್ಳಾರಿ 1,282, ಕಲಬುರಗಿ 1,256, ದಕ್ಷಿಣ ಕನ್ನಡ 1205, ಕೋಲಾರ 1,194, ತುಮಕೂರಿನಲ್ಲಿ 1,174, ಮಂದಿಗೆ ಸೋಂಕು ಬಂದಿದೆ. ಈ ಮೂಲಕ ಕೊರೊನಾ ಪ್ರಕರಣಗಳ ಮೊತ್ತದಲ್ಲಿ ಸಾವಿರ ದಾಟಿದ ಜಿಲ್ಲೆಗಳಾಗಿ ಅಪಾಯದಲ್ಲಿದೆ.