ಹಾವೇರಿ: ಕೊರೊನಾ ಸೋಂಕು ಬಂದರೆ ಭಯ ಪಡುವವರೆ ಹೆಚ್ಚು. ಅದರಲ್ಲೂ ಆಸ್ಪತ್ರೆಯಲ್ಲಿ ಸೋಂಕಿತರು ಗುಣಮುಖರಾಗುವವರೆಗೂ ಭಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸೋಂಕಿತರ ಭಯ ದೂರವಾಗಿಸಲು ಮತ್ತು ಜ್ಞಾನ ಹೆಚ್ಚಿಸಿಕೊಳ್ಳಲು ಅವರಿಗೆ ಓದಲು ಪುಸ್ತಕಗಳನ್ನು ನೀಡುವ ಮೂಲಕ ಆತ್ಮಸ್ಥೈರ್ಯ ತುಂಬಲು ಹಾವೇರಿ ಜಿಲ್ಲೆ ಸವಣೂರು ತಾಲೂಕು ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮುಂದಾಗಿದ್ದಾರೆ.
Advertisement
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಸುಮ್ಮನೆ ಕಾಲಕಳೆಯಲಾಗದೆ ಭಯದಲ್ಲಿ ದಿನಕಳೆಯುತ್ತಿದ್ದಾರೆ ಎಂಬುದನ್ನು ಗಮನಿಸಿದ, ಸವಣೂರು ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಮಹಾಂತೇಶ್ ಹೊಳೆಮ್ಮನವರ ಎಂಬುವರು 70 ಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಬಳಿಕ ತಾಲೂಕು ಆಸ್ಪತ್ರೆಯಲ್ಲಿರೋ ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ನ ಸಿಬ್ಬಂದಿಗೆ ಪುಸ್ತಕಗಳ ಹಸ್ತಾಂತರ ಮಾಡಿದ್ದಾರೆ. ಪುಸ್ತಕಗಳನ್ನ ಓದೋ ಮೂಲಕ ಸೋಂಕಿತರಲ್ಲಿನ ಭಯ ದೂರ ಮಾಡಲು, ಸೋಂಕಿತರಲ್ಲಿ ಆತ್ಮಸ್ಥೈರ್ಯ ಮೂಡಿಸಲು ವಿನೂತನ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಸೋಂಕಿತರೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಆರೋಗ್ಯಾಧಿಕಾರಿ
Advertisement
Advertisement
ಇವರ ಈ ಹೊಸ ಪ್ಲಾನ್ನಿಂದಾಗಿ ಸೋಂಕಿತರು ಆಸ್ಪತ್ರೆಯಲ್ಲಿ ಪುಸ್ತಕಗಳನ್ನು ಓದುತ್ತ ಸೋಂಕಿನಿಂದ ಮುಕ್ತರಾಗುತ್ತಿದ್ದಾರೆ. ಮಹಾಂತೇಶ್ ಅವರ ಈ ಕಾರ್ಯಕ್ಕೆ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಹಾಗೂ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement