ಭೋಪಾಲ್: ಆಟೋವನ್ನು ಅಂಬುಲೆನ್ಸ್ ಮಾಡಿ, ಕೊರೊನಾ ಸೋಂಕಿತರಿಗೆ ಉಚಿತ ಸೇವೆ ನೀಡುತ್ತಿರುವ ಚಾಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನ ಜವೇದ್ ಖಾನ್ ಜನರಿಗೆ ಉಚಿತವಾಗಿ ಸೇವೆ ಮಾಡುತ್ತಿದ್ದಾರೆ. ಕೋವಿಡ್ ಸೋಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವಂತಹ ಕೆಲಸವನ್ನು ಜಾವೇದ್ ಮಾಡುತ್ತಿದ್ದಾರೆ. ಆಟೋದಲ್ಲಿ ಆಕ್ಸಿಜನ್, ಮೆಡಿಶಿನ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಬುಲೆನ್ಸ್ನಲ್ಲಿ ಹೇಗೆ ಇರುತ್ತದೆಯೋ ಅದೇ ರೀತಿಯಲ್ಲಿ ಆಟೋವನ್ನು ಮಾಡಲಾಗಿದೆ.
Advertisement
Advertisement
ಕೊರೊನಾ 2ನೇ ಅಲೆ ಜನರನ್ನು ಹಿಂಸೆ ಮಾಡುತ್ತಿದೆ. ಇಂಹತ ಸಂದರ್ಭದಲ್ಲಿ ನಾನು ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮನೆಯವರ ಸಲಹೆ ಪಡೆದು ಆಟೋದಲ್ಲಿ ಅಂಬುಲೆನ್ಸ್ ಮಾಡಿ ಸೇವೆ ಮಾಡುತ್ತಿದ್ದೇನೆ. 18 ವರ್ಷಗಳಿಂದ ಆಟೋವನ್ನು ಓಡಿಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಯಾರಿಗೂ ಸೋಂಕು ತಗುಲಿಲ್ಲ. ಆದರೆ ದೇಶದಲ್ಲಿ ಸಾವು, ನೋವುಗಳನ್ನು ನೋಡಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜಾವೇದ್ ಹೇಳಿದ್ದಾರೆ.
Advertisement
Advertisement
ಕಳೆದ ಮೂರು ದಿನಗಳಲ್ಲಿ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಸ್ಯಾನಿಟೈಸರ್, ಆಕ್ಸಿಜನ್, ಕೆಲವು ಮೆಡಿಸಿನ್ ಇಟ್ಟಿದ್ದೇನೆ. ಆಕ್ಸಿಜನ್ಕೊಳ್ಳಲು ಪ್ರತಿನಿತ್ಯ 600 ರೂಪಾಯಿ ಖರ್ಚು ಮಾಡುತ್ತೇನೆ. ಸೋಂಕಿತರು ಇರುವ ಜಾಗಕ್ಕೆ ಹೋಗಿ ಕರೆದಕೊಂಡು ಬರುತ್ತೇನೆ. ನನ್ನ ಪತ್ನಿ ಕೂಡಾ ನನ್ನ ಈ ಕೆಲಸಕ್ಕೆ ಸಹಕಾರ ನೀಡುತ್ತಾಳೆ ಎಂದಿದ್ದಾರೆ.