ರಾಯಚೂರು: ಜಿಲ್ಲೆಯಲ್ಲಿ ಮೊದಲಿನಿಂದಲೂ ವೈದ್ಯರ ಕೊರತೆ ಎದ್ದು ಕಾಡುತ್ತಲೇ ಇದೆ. ಅದರಲ್ಲೂ ತಾಲೂಕು ಆಸ್ಪತ್ರೆಗಳಲ್ಲಿ ಎಷ್ಟೋ ವೈದ್ಯರ ಹುದ್ದೆಗಳು ಖಾಲಿ ಬಿದ್ದಿವೆ. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಈಗಂತೂ ವೈದ್ಯರ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಹೀಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಹಿರಿಯ ಸ್ಟಾಫ್ ನರ್ಸ್ ಗಳೇ ವೈದ್ಯರ ಮಾರ್ಗದರ್ಶನದಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ 10 ನಾರ್ಮಲ್ ಡೆಲಿವರಿ ಮಾಡಿದ್ದಾರೆ.
Advertisement
ಅನ್ನಪೂರ್ಣ, ನಿರ್ಮಲ ಹಾಗೂ ಸುಮಿತ್ರಾ ಕೊರೊನಾ ಭಯದ ನಡುವೆಯೂ ಹೆರಿಗೆ ಮಾಡಿಸಿ ತಾಯಿ ಮಕ್ಕಳ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೊರೊನಾ ಸೋಂಕಿತ ಗರ್ಭಿಣಿಯರು ವೈದ್ಯರ ಕೊರತೆ ಹಿನ್ನೆಲೆ ಪರದಾಟ ನಡೆಸಿದ್ದರು. ಇದರಿಂದ ಪಿಪಿಇ ಕಿಟ್ ಧರಿಸಿ ನರ್ಸ್ ಗಳೇ ಹೆರಿಗೆ ಕಾರ್ಯಕ್ಕೆ ಮುಂದಾಗಿದ್ದಾರೆ.
Advertisement
Advertisement
ಸಿಂಧನೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ತಾಲೂಕು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವೈದ್ಯರ ಕೊರತೆ ಹಿನ್ನೆಲೆ ನರ್ಸ್ ಗಳಿಂದ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗುತ್ತಿದೆ. ಎಲ್ಲಾ 10 ಜನ ತಾಯಂದಿರು ಹಾಗೂ ಮಕ್ಕಳು ಹೆರಿಗೆ ಬಳಿಕ ಆರೋಗ್ಯವಾಗಿದ್ದು, ಕೋವಿಡ್ ಚಿಕಿತ್ಸೆ ಮುಂದುವರಿದಿದೆ.