ಬೆಂಗಳೂರು: ಕೊರೊನಾ ಹಾವಳಿ, ಲಾಕ್ಡೌನ್ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೋಮವಾರ ಬಜೆಟ್ ಮಂಡಿಸುತ್ತಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆ 5 ನಿಮಿಷಕ್ಕೆ ತಮ್ಮ 8ನೇ ಬಾರಿಯ ಬಜೆಟ್ ಮಂಡಿಸ್ತಿದ್ದು, ರಾಜ್ಯದ ಖಜಾನೆ ಭರ್ತಿಗೆ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
ಈಗಾಗಲೇ ಹಿಂದಿನ ಸರ್ಕಾರಗಳ ಯೋಜನೆಗಳು ಮುಗಿದೋಗಿವೆ. ಈಗ ನಮ್ಮ ಸರ್ಕಾರದ ಯೋಜನೆಗಳು ಅಂತ ಮೊನ್ನೆ ಹೇಳಿಕೆ ಕೊಟ್ಟಿರೋದು ಸಾವಿರಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಾಗಾಗಿ ಹಣಕಾಸಿನ ಕೊರತೆ, ಆರ್ಥಿಕ ಸವಾಲುಗಳ ಮಧ್ಯೆ ಕೃಷಿ, ಕೈಗಾರಿಕೆ, ಅಬಕಾರಿ, ಆಸ್ತಿ ನೊಂದಣಿ, ಸಾರಿಗೆ ಕ್ಷೇತ್ರಗಳಿಗೆ ನಿರೀಕ್ಷಿತ ಅನುದಾನ ಸಿಗಲಿದ್ಯಾ? ಜನಪ್ರಿಯ ಯೋಜನೆಗನ್ನು ಘೋಷಿಸ್ತಾರಾ ಅನ್ನೋದು ಕುತೂಹಲವಾಗಿದೆ.
Advertisement
Advertisement
ಬಿಎಸ್ವೈ ಮುಂದಿರುವ ಸವಾಲುಗಳು: ಕೊರೊನಾ ವರ್ಷವಾದ ಹಿನ್ನೆಲೆ ಖಜಾನೆಗೆ ಹಣಕಾಸಿನ ಕೊರತೆ ಇದೆ ಎನ್ನಲಾಗ್ತಿದೆ. ಈ ಬಾರಿಯ ಬಜೆಟ್ಗೆ ಹಿಂದಿನ ಬಜೆಟ್ನಲ್ಲಿ ಉಳಿದ ಹಣವೇ ಆಸರೆ ಆಗಬಹುದು. ಕಳೆದ ಬಾರಿ 2 ಲಕ್ಷದ 37 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು. ಕೊರೊನಾ ಹೊಡೆತ ಹಿನ್ನೆಲೆ ಜನಪ್ರಿಯ ಯೋಜನೆಗಳಿಗೆ ಕೊಕ್ ನೀಡುವ ಸಾಧ್ಯತೆಗಳಿವೆ.
Advertisement
Advertisement
ಬಿಎಸ್ವೈ ಬಜೆಟ್ ನಿರೀಕ್ಷೆಗಳು:
* ಪೆಟ್ರೋಲ್, ಡಿಸೇಲ್ ಮೇಲೆ ತೆರಿಗೆ ವಿಧಿಸೋದು ಡೌಟ್
* ರೈತರ ಸಾಲದ ಪ್ರಮಾಣ ಹೆಚ್ಚಳ ಸಾಧ್ಯತೆ.
* ಕೃಷಿ ಮಾರುಕಟ್ಟೆಗೆ ಹೊಸ ಯೋಜನೆ ಘೋಷಣೆ ಸಾಧ್ಯತೆ
* ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ಸಾಧ್ಯತೆ.
* ಬೆಲೆ ಸ್ಥಿರೀಕರಣ ಸಂಬಂಧ 5 ಸಾವಿರ ಕೋಟಿ ರೂ. ಆವರ್ತ ನಿಧಿ ಘೋಷಣೆ ನಿರೀಕ್ಷೆ.
* ಮಹಿಳಾ ಸಬಲೀಕರಣಕ್ಕೆ ಆದ್ಯತೆ, ಯೋಜನೆ ಜಾರಿ ಸಾಧ್ಯತೆ (ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತಷ್ಟು ಆದ್ಯತೆ)
* ಅಬಕಾರಿ ತೆರಿಗೆ ಕೊಂಚ ಹೆಚ್ಚಳ ಮಾಡೋ ಸಾಧ್ಯತೆ.
* ಆಸ್ತಿ ನೋಂದಣಿ ಶುಲ್ಕ ಹೆಚ್ಚಳ ಸಾಧ್ಯತೆ.
* ಪ್ರತಿ ತಾಲೂಕಲ್ಲಿ 2 ಗೋಶಾಲೆ ಆರಂಭಕ್ಕೆ ಆರ್ಥಿಕ ನೆರವು.
* ಒತ್ತುವರಿಯಾದ ಗೋಮಾಳ ಮರು ಸ್ವಾಧೀನಕ್ಕೆ ಪ್ರತ್ಯೇಕ ನೀತಿ ಸಾಧ್ಯತೆ
* ಸಾರಿಗೆ ಸಂಸ್ಥೆಗಳ ಆರ್ಥಿಕ ಪುನಶ್ಚೇತನಕ್ಕಾಗಿ ಪರ್ಯಾಯ ಯೋಜನೆ.
* ಬೃಹತ್ ನೀರಾವರಿ ಯೋಜನೆಗೆ ಆದ್ಯತೆ ನಿರೀಕ್ಷೆ.
* ನೀರಾವರಿ ಯೋಜನೆಯಡಿ ಹಳ್ಳಿಗಳಲ್ಲಿ ಚೆಕ್ (ಚಿಕ್ಕ) ಡ್ಯಾಮ್ ನಿರ್ಮಾಣಕ್ಕೆ ಒತ್ತು.
* ಕೆಲವು ನೂತನ ತಾಲೂಕುಗಳ ಘೋಷಣೆ ಸಾಧ್ಯತೆ.
* ಪ್ರತಿ ತಾಲೂಕಿಗೆ ಹೈಟೆಕ್ ಪ್ರಾಥಮಿಕ ಆರೋಗ್ಯ ಕೇಂದ್ರ ಘೋಷಣೆ ಸಾಧ್ಯತೆ
* ರಾಜ್ಯ, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಹೈಟೆಕ್ ಆರೋಗ್ಯ ಕೇಂದ್ರ.
* ಪ್ರತಿ ತಾಲೂಕಿಕೊಂದು ಸುಸಜ್ಜಿತ ಮಾದರಿ ಸರ್ಕಾರಿ ಶಾಲೆಗಳ ಪ್ರಾರಂಭ
* ಉನ್ನತ ಶಿಕ್ಷಣ ಇಲಾಖೆಯ ಕಾಲೇಜುಗಳಲ್ಲಿ ಹೈಟೆಕ್ ತರಗತಿಗೆ ಪ್ರಾರಂಭಕ್ಕೆ ಅನುದಾನ ನಿರೀಕ್ಷೆ
ಬಜೆಟ್ ಅಂತಿಮ ಸಿದ್ಧತೆಯಲ್ಲಿ ತೊಡಗಿರೋ ಸಿಎಂ ಯಡಿಯೂರಪ್ಪ#bsyediyurappa #CMYediyurappa #KarnatakaBudget #KarnatakaBudget2021 #Budget2021 #ಕರ್ನಾಟಕಬಜೆಟ್2021 #ಕರ್ನಾಟಕಬಜೆಟ್ @CMofKarnataka pic.twitter.com/8He4SK2ME4
— PublicTV (@publictvnews) March 7, 2021