ಚಂಡಿಗಢ: ಕೊರೊನಾ ಸಂಕಷ್ಟದ ನಡುವೆ ದೇಶದ್ಯಾಂತ ಶಾಲಾ ಕಾಲೇಜುಗಳನ್ನು ಪುನಾರಂಭಿಸುವ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಈ ಹೊತ್ತಲ್ಲಿ ಹರಿಯಾಣ ಸರ್ಕಾರ ಶಾಲೆಗಳನ್ನ ತೆರೆಯುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹರಿಯಾಣ ಶಿಕ್ಷಣ ಸಚಿವ ಕನ್ವಾಲ್ ಪಾಲ್, ಜುಲೈನಲ್ಲಿ ಶಾಲೆಗಳು, ಅಗಸ್ಟ್ ನಲ್ಲಿ ಕಾಲೇಜುಗಳನ್ನು ಆರಂಭಿಸವುದಾಗಿ ಹೇಳಿದ್ದಾರೆ. ಜುಲೈನಲ್ಲಿ ಮೂರು ಹಂತದಲ್ಲಿ ಶಾಲೆಗಳು ಪುನಾರಂಭಗೊಳ್ಳಲಿದ್ದು ಮೊದಲ ಹಂತದಲ್ಲಿ 10, 11, 12ನೇ ತರಗತಿಗಳು ಆರಂಭವಾಗಲಿದೆ.
Advertisement
Advertisement
ಎರಡನೇ ಹಂತದಲ್ಲಿ 6,7,8,9 ನೇ ತರಗತಿಗಳು, ಮೂರನೇ ಹಂತದಲ್ಲಿ 1ರಿಂದ 5ರ ವರೆಗಿನ ತರಗತಿಗಳು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ಆಗಸ್ಟ್ ನಲ್ಲಿ ಪದವಿ ತರಗತಿಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪುನಾರಂಭಿಸಲು ನಿರ್ಧರಿಸಿದ್ದು, ಖಾಸಗಿ ಕೋಚಿಂಗ್ ಕ್ಲಾಸ್ ಮತ್ತು ಟ್ಯೂಶನ್ ಗಳನ್ನು ಪ್ರಾರಂಭಿಸಬಹುದಾಗಿದೆ.
Advertisement
ಮೂವತ್ತು ಮಂದಿ ವಿದ್ಯಾರ್ಥಿಗಳಂತೆ ಬೆಳಗ್ಗೆ ಮತ್ತು ಸಂಜೆ ಎರಡು ಬ್ಯಾಚ್ ನಲ್ಲಿ ಗಳಲ್ಲಿ ತರಗತಿಗಳು ಆರಂಂಭವಾಗಲಿದ್ದು, ಶಾಲೆಗೆ ಬರುವ ಪ್ರತಿ ಮಗು, ಶಿಕ್ಷಕರು ಇತರೆ ಸಿಬ್ಬಂದಿಗೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ರೋಗದ ಗುಣಲಕ್ಷಣಗಳು ಕಂಡು ಬರುವ ವಿದ್ಯಾರ್ಥಿಗಳು ಶಿಕ್ಷಣ ಶಾಲೆಗೆ ಬರುವಂತಿಲ್ಲ, ಮಾಸ್ಕ್ ಸೋಷಿಯಲ್ ಡಿಸ್ಟೆನ್ಸ್ ಸೇರಿದಂತೆ ಕೇಂದ್ರದ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡಲು ಸೂಚನೆ ನೀಡಲಾಗಿದೆ.
Advertisement