ನವದೆಹಲಿ: ಕೊರೊನಾ ತಡೆಗಾಗಿ ಲಸಿಕೆ ಅಭಿಯಾನ ಕಾರ್ಯಕ್ರಮ ಇಡೀ ದೇಶದಲ್ಲಿಯೇ ವೇಗವಾಗಿ ನಡೆಯುತ್ತಿದೆ. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಸಿಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆಯಾ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.
Advertisement
ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹರ್ಷವರ್ಧನ್ ಕೊರೊನಾ ಲಸಿಕೆ ಮತ್ತು ಅಭಿಯಾನದ ಕುರಿತಾಗಿ ತಿಳಿಸಿದರು. ದೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಿವೆ. ಇಷ್ಟು ದೊಡ್ಡ ಜನಸಂಖ್ಯೆ ಇರೋ ದೇಶದಲ್ಲಿ ಲಸಿಕೆ ಅಭಿಯಾನ ವ್ಯವಸ್ಥಿತವಾಗಿ ನಡೆಯುತ್ತಿದೆ. ಆ್ಯಪ್ ಮೂಲಕ ಲಸಿಕೆ ಪಡೆಯುವ ಸ್ಥಳವನ್ನ ನೀವೇ ಬುಕ್ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಆಸ್ಪತ್ರೆಗೆ ತೆರಳಿ ನೋಂದಾಯಿಸಿಕೊಂಡು ಲಸಿಕೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
Advertisement
Advertisement
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಸಿಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜನರಿಗೆ ಕೈಗೆಟುಕುವ ದರ ಅಂದ್ರೆ 250 ರೂ.ಯಲ್ಲಿ ಲಸಿಕೆ ಸಿಗುತ್ತಿದೆ. 250 ರೂ.ಯಲ್ಲಿ ಖಾಸಗಿ ಆಸ್ಪತ್ರೆಗಳು ಲಸಿಕೆಗೆ 150 ರೂಪಾಯಿ ಮತ್ತು ಸೇವೆಗೆ 100 ರೂ. ಶುಲ್ಕ ವಿಧಿಸುತ್ತಿವೆ.
Advertisement
ಸೈಡ್ ಎಫೆಕ್ಟ್ ಇದೆಯಾ?: ನಾನು ನಿನ್ನೆ ದೆಹಲಿಯ ಸುಮಾರು 10 ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಜೊತೆ ಮಾತನಾಡಿದೆ. ಯಾರು ಲಸಿಕೆಯಿಂದ ಅಡ್ಡ ಪರಿಣಾಮದ ಬಗ್ಗೆ ಹೇಳಿಲ್ಲ ಎಂದು ಹೇಳಿದರು.