ನವದೆಹಲಿ: ದೇಶದಲ್ಲಿ ಕೊರೊನಾ ಲಸಿಕೆಯ ಉತ್ಸವನ್ನು ಆಚರಿಸುವ ಪರಿಸ್ಥಿತಿ ಇಲ್ಲ. ಬದಲಿಗೆ ಲಸಿಕೆ ಕೊರತೆ ಗಂಭೀರತೆಯನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.
Advertisement
ಟ್ವಿಟ್ಟರ್ನಲ್ಲಿಏನಿದೆ?: ಕೊರೋನಾ ಹೆಚ್ಚಾಗುತ್ತಿರುವ ಈ ಬಿಕ್ಕಟ್ಟಿ ಸಮಯದಲ್ಲಿ ಲಸಿಕೆ ಕೊರತೆಯು ಬಹಳ ಗಂಭೀರ ಸಮಸ್ಯೆಯಾಗಿದೆ. ಅದು ‘ಉತ್ಸವ’ ಅಲ್ಲ. ನಮ್ಮ ದೇಶವಾಸಿಗಳನ್ನು ಅಪಾಯಕ್ಕೆ ದೂಡಿ, ವ್ಯಾಕ್ಸೀನ್ ರಫ್ತು ಮಾಡುತ್ತಿರುವುದು ಎಷ್ಟು ಸರಿ? ಕೇಂದ್ರ ಸರ್ಕಾರ ಪಕ್ಷಪಾತವಿಲ್ಲದೆ ಎಲ್ಲ ರಾಜ್ಯಗಳಿಗೆ ಸಹಾಯ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಈ ಸಾಂಕ್ರಾಮಿಕ ರೋಗವನ್ನು ಸೋಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
Advertisement
बढ़ते कोरोना संकट में वैक्सीन की कमी एक अतिगंभीर समस्या है, ‘उत्सव’ नहीं-
अपने देशवासियों को ख़तरे में डालकर वैक्सीन एक्सपोर्ट क्या सही है?
केंद्र सरकार सभी राज्यों को बिना पक्षपात के मदद करे।
हम सबको मिलकर इस महामारी को हराना होगा।
— Rahul Gandhi (@RahulGandhi) April 9, 2021
Advertisement
ಎಪ್ರಿಲ್ 11 ರಿಂದ 14 ರವರೆಗೆ ಲಸಿಕಾ ಉತ್ಸವವನ್ನು ಆಚರಿಸುವಂತೆ ಎಲ್ಲಾ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು. ಈ ಕುರಿತಾಗಿ ರಾಹುಲ್ ಗಾಂಧಿ ಟ್ವೀಟ್ ಮೂಲಕವಾಗಿ ಮೋದಿಯವರನ್ನು ಟೀಕಿಸಿದ್ದಾರೆ.
Advertisement
ಮೋದಿ ಹೇಳಿದ್ದೇನು?
ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಎಲ್ಲ ರೀತಿಯ ಗಮನ ಕೊದಬೇಕು. ಅಗತ್ಯವಿರುವ ವಯೋಮಾನಕ್ಕೆ ಬೇಗನೆ ಲಸಿಕೆ ಸಿಗುವಂತೆ ಮಾಡಿ. ಎಪ್ರಿಲ್ 11ರಿಂದ 14ರವರೆಗೆ ಲಸಿಕಾ ಅಭಿಯಾನ ನಡೆಸೊಣ. ಲಸಿಕೆ ಹಾಳಾಗುವುದನ್ನು ತಪ್ಪಿಸಿ ಹೆಚ್ಚು ಜನರಿಗೆ ಲಸಿಕೆ ಸಿಗುವಂತೆ ಮಾಡೋಣ ಎಂದು ಹೇಳಿದ್ದರು.