ಮೈಸೂರು: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಪ್ರಯೋಗ ಹಂತದಲ್ಲಿರುವ ಕೋವಿಶಿಲ್ಡ್ ಲಸಿಕೆಯನ್ನು ಮೈಸೂರಿನ ವೈದ್ಯ ದಂಪತಿಯನ್ನು ಹಾಕಿಸಿಕೊಂಡಿದ್ದಾರೆ.
3ನೇ ಹಂತದ ಲಸಿಕೆಯನ್ನು ಮೈಸೂರಿನ ವೈದ್ಯೆ ಶಿಲ್ಪ ಸಂತೃಪ್ತ್ ಹಾಗೂ ಅವರ ಪತಿ ಡಾ. ಸಂತೃಪ್ತ್ ಹಾಕಿಸಿ ಕೊಂಡಿದ್ದಾರೆ. ಈ ಬಗ್ಗೆ ಡಾ. ಶಿಲ್ಪ ಸಂತೃಪ್ತ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
Advertisement
ಅ. 1 ರಂದು ಕೊರೊನಾ ಲಸಿಕೆ ಹಾಕಿಸಿಕೊಂಡಿರುವ ವೈದ್ಯೆ ಶಿಲ್ಪ ಲಸಿಕೆ ಪಡೆದು 28 ದಿನಗಳಿಂದ ಆರೋಗ್ಯದಿಂದಿದ್ದಾರೆ. ಇನ್ನೂ ಎರಡು ಇಂಜೆಕ್ಷನ್ ಪಡೆಯಬೇಕಿದ್ದು ಮುಂದಿನ ತಿಂಗಳು ಮತ್ತೊಂದು ಇಂಜೆಕ್ಷನ್ ಪಡೆಯಲಿದ್ದಾರೆ. ಇದನ್ನೂ ಓದಿ: ಆಕ್ಸ್ಫರ್ಡ್ ಕೊರೊನಾ ಲಸಿಕೆ ಸುರಕ್ಷಿತ, ಯಾವುದೇ ಅಡ್ಡ ಪರಿಣಾಮವಿಲ್ಲ
Advertisement
Advertisement
ಮೊದಲ 36 ಗಂಟೆ ಸುಸ್ತು ಮೈಕೈ ನೋವು ಕಾಣಿಸೊಕೊಂಡಿದ್ದು ಬಿಟ್ಟರೆ ಮತ್ಯಾವ ಸಮಸ್ಯೆ ಕಾಣಿಸಿಲ್ಲ. ವೈದ್ಯೆಯಾಗಿ ನಾನೇ ಜವಬ್ದಾರಿ ನಿರ್ವಹಿಸದಿದ್ದರೆ ಮತ್ಯಾರು ಎನ್ನುವ ಉದ್ದೇಶದಿಂದ ಲಸಿಕೆ ಪಡೆದಿದ್ದೇನೆ. ಲಸಿಕೆ ಪಡೆದ ನಂತರ ನನ್ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನನಗಿಂತ ಮುಂಚಿತವಾಗಿ ಹಲವು ವೈದ್ಯರು ಲಸಿಕೆ ಪಡೆದಿದ್ದರು. ನಾನು ನನ್ನ ಪತ್ನಿ ಇಬ್ಬರು ಲಸಿಕೆ ಪಡೆದಿದ್ದೇವೆ ಎಂದು ಶಿಲ್ಪಾ ಹೇಳಿದ್ದಾರೆ.
Advertisement
ನಾವು ಫೇಸ್ 3 ನಲ್ಲಿ ಲಸಿಕೆ ಪ್ರಯೋಗಕ್ಕೆ ಒಳಗಾಗಿದ್ದೇನೆ. ಫೇಸ್ 3 ವಿಭಾಗದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಹಾಗೂ 65 ವರ್ಷದ ಒಳಗಿನ ವ್ಯಕ್ತಿಗಳ ಮೇಲೆ ಲಸಿಕೆ ಪ್ರಯೋಗ ಆಗಲಿದೆ. ಲಸಿಕೆ ಪಡೆದ ನನ್ನ ಸ್ನೇಹಿತರಲ್ಲಿ ಒಬ್ಬರಿಗೆ ಸಾಮಾನ್ಯ ಜ್ವರ ಬಂದಿತ್ತು ಅಷ್ಟೇ. ಲಸಿಕೆ ಪಡೆದ ನಂತರ ಕೊರೊನಾ ಲಕ್ಷಣಗಳು ಕಾಣಿಸಿಲ್ಲ. ಲಸಿಕೆ ಪ್ರಯೋಗಕ್ಕೂ ಮುನ್ನ ನನಗೂ ಆತಂಕ ಇತ್ತು. ಆದರೆ ಲಸಿಕೆ ಪ್ರಯೋಗಕ್ಕೆ ಒಳಗಾಗೋದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು. ಇದನ್ನೂ ಓದಿ: ಪ್ರತಿ ನಿಮಿಷಕ್ಕೆ 500, ಪ್ರತಿ ಗಂಟೆಗೆ 30 ಸಾವಿರ ಸೀಸೆ ಲಸಿಕೆ ಉತ್ಪಾದಿಸುತ್ತೇವೆ: ಸೀರಮ್ ಸಿಇಓ
ಜನಸಾಮಾನ್ಯರು ಲಸಿಕೆ ಪ್ರಯೋಗಕ್ಕೆ ಒಳಗಾಗಬೇಕು. ಆಗಲೇ ಸಮಾಜಕ್ಕೆ ಉತ್ತಮ ಲಸಿಕೆ ಒದಗಿಸಲು ಸಾಧ್ಯವಾಗುತ್ತದೆ. ಎಲ್ಲರೂ ಲಸಿಕೆ ಪ್ರಯೋಗಕ್ಕೆ ಒಳಗಾಗಬೇಕು. ನನ್ನನ್ನ ನೋಡಿಯಾದರೂ ಜನರು ಲಸಿಕೆ ಪ್ರಯೋಗಕ್ಕೆ ಮುಂದಾಗಬೇಕು. ಆಗಲೇ ಕೊರೊನಾದಿಂದ ನಾವು ಮುಕ್ತರಾಗಲು ಸಾಧ್ಯ ಎಂದು ಶಿಲ್ಪಾ ಹೇಳಿದರು.
ಎಲ್ಲರಿಗಿಂತ ಮೊದಲು ಹೇಗೆ?
ಆಕ್ಸ್ಫರ್ಡ್ ವಿಶ್ವವಿದ್ಯಾಲಯ ತೀವ್ರತೆರನಾದ ಶ್ವಾಸಕೋಶದ ಸಮಸ್ಯೆ ತರಬಲ್ಲ ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡೋಮ್) ಹಾಗೂ ಎಂಇಆರ್ಎಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡೋಮ್) ಸೋಂಕಿಗೆ ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿತ್ತು. ಈ ನಡುವೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಲ್ಲ ಕೊರೊನಾ ವೈರಸ್ ಬಂದಿದೆ. ಹೀಗಾಗಿ ಕೂಡಲೇ ತಂಡ ಕೋವಿಡ್ಗೆ ಲಸಿಕೆ ಕಂಡು ಹಿಡಿಯಲು ಮುಂದಾಗಿದೆ. ಬೇರೆಯವರು ಲಸಿಕೆ ಕಂಡು ಹಿಡಿಯುವ ಪ್ರಯೋಗ ನಡೆಸುವುದಕ್ಕೆ ಮುನ್ನವೇ ಇವರು ವೈರಸ್ ಕುರಿತು ಸಾಕಷ್ಟು ಸಂಶೋಧನೆ ನಡೆಸಿರುವ ಕಾರಣ ವಿಶ್ವದಲ್ಲಿ ಈ ಲಸಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.