– ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್
ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 96 ಅಂಕಗಳನ್ನು ಪಡೆದಿದ್ದಾರೆ. ಪಿಸಿಎಂಬಿ, ಸಂಸ್ಕೃತದಲ್ಲಿ ಔಟ್ ಆಫ್ ಔಟ್. ಕೊರೊನಾ ರಜೆ ನನಗೆ ವರದಾನವಾಯಿತು. ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವುದಕ್ಕೆ ಕೊaರೊನಾ ರಜೆ ಕಾರಣ ಎಂದು ಅಭಿಜ್ಞಾ ಹೇಳಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿಜ್ಞಾ, ಈ ಮಾರ್ಕ್ ಬಂದಿರುವುದು ನನಗೆ ಬಹಳ ಖುಷಿಯಾಗಿದೆ. ಕಾಲೇಜಿನ ಎಲ್ಲ ಶಿಕ್ಷಕರ ಸಹಕಾರದಿಂದ ನನಗೆ ಈ ಸಾಧನೆ ಸಾಧ್ಯವಾಗಿದೆ. ನಾನು ಪಿಸಿಎಂಸಿ. ಎಲ್ಲ ವಿಷಯಗಳ ಶಿಕ್ಷಕರು ಉತ್ತಮವಾಗಿ ಪಾಠ ಮಾಡಿದ್ದಾರೆ. ಶಿಕ್ಷಕರ ಸಹಕಾರದಿಂದಲೇ ಈ ಸಾಧನೆ ಸಾಧ್ಯವಾಯಿತು. ಜೊತೆಗೆ ಕುಟುಂಬದಿಂದಲೂ ಕೂಡ ನನಗೆ ತುಂಬಾ ಸಪೋರ್ಟ್ ಸಿಕ್ಕಿದೆ. ಮನೆಯಲ್ಲಿ ಚೆನ್ನಾಗಿ ಓದುವ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದರು ಎಲ್ಲರಿಗೂ ಧನ್ಯವಾದ ಎಂದರು.
Advertisement
Advertisement
ಪ್ರತಿ ದಿನ ಏನೇನು ಪಾಠ ಮಾಡುತ್ತಿದ್ದರು ಅದನ್ನು ಅಂದೇ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಹೀಗಾಗಿ ಪರೀಕ್ಷಾ ಸಮಯದಲ್ಲಿ ನನಗೆ ಯಾವುದೇ ಒತ್ತಡ ಆಗ್ಲಿಲ್ಲ. ಕೊರೊನಾದಂತಹ ರೋಗ ಬರುತ್ತದೆ ಅಂತ ನಾವು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಇಂಗ್ಲಿಷ್ ಪರೀಕ್ಷೆ ಬಹಳಷ್ಟು ಮುಂದೆ ಹೋಗಿತ್ತು. ಕೊರೊನಾ ರಜೆ ನಮಗೆ ಬಹಳ ಉಪಯೋಗ ಆಯ್ತು. ಇಂಗ್ಲಿಷ್ ವಿಷಯವನ್ನು ಓದಲು ಇದು ಬಹಳ ಸಹಕಾರಿಯಾಯಿತು ಎಂದು ಅಭಿಜ್ಞಾ ತಿಳಿಸಿದ್ದಾರೆ.
Advertisement
ಇಂಗ್ಲಿಷ್ ಓದಲು ನನಗೆ ಬಹಳಷ್ಟು ಸಮಯ ಸಿಕ್ಕಿತು. ಪ್ರಿಪರೇಷನ್ ಮಾಡಲಿಕ್ಕೆ ಬಹಳ ಖುಷಿಯಾಯ್ತು. ಕೊರೊನಾ ರಜೆ ನನಗೆ ಬಹಳಷ್ಟು ಕಾನ್ಫಿಡೆನ್ಸ್ ಅನ್ನು ಕೊಟ್ಟಿತ್ತು. ಮನಸ್ಸಿಗೆ ಒತ್ತಡ ಹಾಕಿಕೊಂಡು ನಾನು ಪರೀಕ್ಷೆಗೆ ಪೂರ್ವ ಸಿದ್ಧತೆಯನ್ನು ಮಾಡಿಲ್ಲ. ಎರಡು ವರ್ಷದ ಹಿಂದೆ ಹತ್ತನೇ ತರಗತಿಯಲ್ಲಿ ನನಗೆ 624 ಅಂಕ ಬಂದಿತ್ತು. ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಬಂದಾಗ ಪಿಯುಸಿ ಪರೀಕ್ಷೆಯ ಮೇಲೆ ಕೂಡ ನಾನು ಕಣ್ಣು ಇಟ್ಟಿದ್ದೆ. ಹೆಚ್ಚು ಅಂಕ ಗಳಿಸಬೇಕು ಎಂದು ತಯಾರಿಗಳನ್ನು ಮಾಡಿಕೊಂಡಿದ್ದೆ.
Advertisement
ಇಂಗ್ಲಿಷ್ ನಲ್ಲಿ ಔಟ್ ಆಫ್ ಔಟ್ ಬರುವುದು ಬಹಳ ಕಷ್ಟ. ಗ್ರಾಮರ್ ಮತ್ತಿತರ ವಿಚಾರಗಳಲ್ಲಿ ಅಂಕಗಳ ಕಟ್ ಆಗುತ್ತದೆ. 96 ಅಂಕ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ನನ್ನ ಮಟ್ಟಿಗೆ 96 ಅಂಕ ದೊಡ್ಡದು ಎಂದು ಭಾವಿಸುತ್ತೇನೆ ಎಂದು ಖುಷಿ ಹಂಚಿಕೊಂಡರು.
ಮುಂದೆ ನಾನು ಎಂಜಿನಿಯರಿಂಗ್ ಮಾಡಬೇಕು ಎಂದು ಅಂದುಕೊಂಡಿದ್ದೇನೆ. ಸಿಇಟಿ ಪರೀಕ್ಷೆಯ ರಿಸಲ್ಟ್ ಮೇಲೆ ಎಲ್ಲಿ ಎಂಜಿನಿಯರಿಂಗ್ ಮಾಡಬೇಕು ಮತ್ತು ಯಾವುದನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನಿಸುತ್ತೇನೆ. ಫಲಿತಾಂಶ ಬಂದ ಮೇಲೆ ತುಂಬಾ ಫೋನ್ ಕರೆಗಳು ಬಂದವು. ಕಾಲೇಜಿನಿಂದ ಸಂಬಂಧಿಕರಿಂದ, ಗೆಳತಿಯರಿಂದ ಶುಭಾಶಯಗಳು ಸಿಕ್ಕಿ ಬಹಳ ಖುಷಿಯಾಗಿದೆ. ಎರಡು ವರ್ಷ ಪರಿಶ್ರಮ ಪಟ್ಟು ಓದಿದ್ದು ಇಂದು ಸಾರ್ಥಕ ಆಯ್ತು ಎಂದು ಅಭಿಜ್ಞಾ ಹೇಳಿದರು.