– ಬೆಂಗಳೂರು ನಗರವೊಂದರಲ್ಲೇ 7 ಸಾವು
ಬೆಂಗಳೂರು: ರಾಜ್ಯದಲ್ಲಿ ಇಂದು ಕೋವಿಡ್-19 ಮಹಾಮಾರಿಗೆ 10 ಮಂದಿ ಬಲಿಯಾಗಿದ್ದು, ಅದರಲ್ಲೂ ಬೆಂಗಳೂರು ಒಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಬೀದರಿನಲ್ಲಿ ಇಬ್ಬರು, ವಿಜಯಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 124ಕ್ಕೇರಿದೆ.
ರಾಜ್ಯದಲ್ಲಿ 78 ಕೊರೊನಾ ಸೋಂಕಿನ ರೋಗಿಗಳು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು 35, ಕಲಬುರಗಿ 12, ಬೀದರ್ ಮತ್ತು ಧಾರವಾಡ ತಲಾ 5, ಬಳ್ಳಾರಿ ಮತ್ತು ಶಿವಮೊಗ್ಗ ತಲಾ 4, ದಾವಣಗೆರೆ ಮತ್ತು ಉಡುಪಿಯಲ್ಲಿ ತಲಾ 3, ವಿಜಯಪುರ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 2, ಹಾಸನ, ಗದಗ ಮತ್ತು ಬೆಳಗಾವಿಯ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
Advertisement
ಸಾವನ್ನಪ್ಪಿದವರ ವಿವರ:
ರೋಗಿ ಸಂಖ್ಯೆ-7,186, 65 ವರ್ಷದ ಮಹಿಳೆ ಬೆಂಗಳೂರು ನಗರದ ನಿವಾಸಿಯಾಗಿದ್ದು, ಜ್ವರ ಮತ್ತು ಅಧಿಕ ರಕ್ತದೊತ್ತಡದ ಹಿನ್ನೆಲೆಯೊಂದಿಗೆ ಜೂ.13 ರಂದು ನಗರದ ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಜೂ.18 ರಂದು ಸಾವನ್ನಪ್ಪಿದ್ದರು.
Advertisement
ರೋಗಿ ಸಂಖ್ಯೆ-7817, 78 ವರ್ಷದ ಪುರುಷ, ಬೆಂಗಳೂರು ನಗರದ ನಿವಾಸಿಯಾಗಿದ್ದು, ವಿಷಮ ಶೀತ ಜ್ವರದಿಂದ ಬಳಲುತ್ತಿದ್ದರು. ಇವರು ಜೂ.16 ರಂದು ನಗರದ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜೂ.18 ರಂದು ಸಾವನ್ನಪ್ಪಿದ್ದರು.
Advertisement
ರೋಗಿ ಸಂಖ್ಯೆ-8,094, 74 ವರ್ಷದ ಪುರುಷ, ಬೆಂಗಳೂರು ನಗರದ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜ್ವರ ಮತ್ತು ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಜೂ.15 ರಂದು ನಗರದ ನಿಗದಿತ ಆಸ್ಪತ್ರೆ ದಾಖಲಾಗಿದ್ದರು. ಜೂ.16 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-8,178, 58 ವರ್ಷದ ಪುರುಷ, ಬೆಂಗಳೂರು ನಗರದ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಯಾಗಿದ್ದು, ಜೂ.17 ನಗರದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-8,179, 50 ವರ್ಷದ ಪುರುಷ, ಬೆಂಗಳೂರು ನಗರದ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ, ಮಧುಮೇಹ ಹಿನ್ನೆಲೆಯಲ್ಲಿ ಜೂ. 17 ರಂದು ನಗರದ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-8,199, 54 ವರ್ಷದ ಪುರುಷ, ಬೆಂಗಳೂರು ನಗರದ ನಿವಾಸಿಯಾಗಿದ್ದು, ಕೆಮ್ಮು ಮತ್ತು ಜ್ವರದ ಹಿನ್ನೆಲೆಯಲ್ಲಿ ಜೂ.18 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಂದೇ ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-8,203, 69 ವರ್ಷದ ಪುರುಷ ಬೆಂಗಳೂರು ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಹಾರಾಷ್ಟ್ರದಿಂದ ಹಿಂದಿರುಗಿರುವ ಪ್ರಯಾಣದ ಹಿನ್ನೆಲೆ ಹಾಗೂ ಮಧುಮೇಹ, ವಿಷಮ ಶೀತ ಜ್ವರದಿಂದ ಜೂ.17 ರಂದು ನಗರದ ಕ್ವಾರಂಟೈನ್ ಕೇಂದ್ರದಲ್ಲಿ ಸಾವನ್ನಪ್ಪಿದ್ದರು.
ರೋಗಿ ಸಂಖ್ಯೆ-7835, 66 ವರ್ಷದ ಮಹಿಳೆ, ವಿಜಯಪುರ ಜಿಲ್ಲೆಯ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಇವರನ್ನು ಜೂ.15 ರಂದು ವಿಜಯಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಚಿಕಿತ್ಸೆ ಫಲಿಸದೆ ಜೂ.17 ರಂದು ಸಾವನ್ನಪಿದ್ದರು.
ರೋಗಿ ಸಂಖ್ಯೆ-7,959, 45 ವರ್ಷದ ಪುರುಷ, ಬೀದರ್ ಜಿಲ್ಲೆಯ ನಿವಾಸಿಯಾಗಿದ್ದು, ಹೈದರಾಬಾದರ್, ತೆಲಾಂಗಾಣ ರಾಜ್ಯಕ್ಕೆ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಜೂ.13 ಬೀದರಿನ ನಿಗದಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜೂ.18 ರಂದು ಚಿಕಿತ್ಸೆ ಫಲಿಸದೆ ಸಾವನ್ನಪಿದ್ದರು.
ರೋಗಿ ಸಂಖ್ಯೆ-7,962, 70 ವರ್ಷದ ಪುರುಷ, ಬೀದರ್ ಜಿಲ್ಲೆಯ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಜೂ.11 ರಂದು ಸಾವನ್ನಪ್ಪಿದ ಬಳಿಕ ಬೀದರಿನ ನಿಗದಿತ ಆಸ್ಪತ್ರೆಗೆ ಕರೆತರಲಾಗಿತ್ತು.