-ಜನ ಸೇರುವುದನ್ನ ತಡೆಯಲು ವಿಫಲವಾದ ತಾಲೂಕು ಆಡಳಿತ
ರಾಯಚೂರು: ಶ್ರಾವಣ ಮಾಸ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಜಾತ್ರೆಗಳು ಜೋರಾಗೇ ನಡೆಯುತ್ತವೆ. ಆದ್ರೆ ಕೊರೊನಾ ಸೋಂಕು ಹರಡುವಿಕೆ ತಡೆಯಲು ಜನ ಸೇರುವುದನ್ನ ನಿಯಂತ್ರಿಸಲು ಜಾತ್ರೆಗಳಿಗೆ ನಿರ್ಭಂದ ಹೇರಲಾಗಿದೆ. ಇದೆಲ್ಲಾ ನಿಯಮಗಳನ್ನ ಗಾಳಿಗೆ ತೂರಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯನ್ನ ಜೋರಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.
Advertisement
ಕೊರೊನಾ ಭೀತಿ ಮರೆತು ಜೋರಾಗಿ ನಡೆದ ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನ ಪಾಲ್ಗೊಂಡಿದ್ದರು. ಕೊರೊನಾ ಸೋಂಕು ಹರಡುವಿಕೆ ಭಯವೇ ಇಲ್ಲದೇ ಜಾತ್ರೆಯಲ್ಲಿ ನಾನಾ ಸಂಪ್ರದಾಯ ಆಚರಣೆ ಮಾಡಲಾಗಿದೆ.
Advertisement
Advertisement
ಪುರವಂತಿಕೆ ಸೇವೆ, ಕಳಸಾರೋಹಣ, ಬಾಯಿಗೆ ಶಸ್ತ್ರ ಹಾಕಿಸಿಕೊಂಡು ವೀರಭದ್ರೇಶ್ವರ ಭಕ್ತರು ಭಕ್ತಿ ಮೆರೆದಿದ್ದಾರೆ. ಸಾವಿರಾರು ತೆಂಗಿನಕಾಯಿ ಒಡೆದು ಭಕ್ತರು ಹರಕೆ ತೀರಿಸಿದ್ದಾರೆ. ಜಾತ್ರೆ ಆಚರಣೆಯಲ್ಲಿ ಜನ ಸೇರುವುದನ್ನ ತಡೆಯುವಲ್ಲಿ ಲಿಂಗಸೂಗುರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.
Advertisement