– ತಹಶೀಲ್ದಾರ್, ಅಧಿಕಾರಿಗಳು ಅಜ್ಜಿ ಬೈಗುಳಕ್ಕೆ ತಬ್ಬಿಬ್ಬು
ವಿಜಯಪುರ: ಕೊರೊನಾ ಪಾಸಿಟಿವ್ ಇರುವವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದವರಿಗೆ ಅಜ್ಜಿಯೊಬ್ಬರು ಅವಾಜ್ ಹಾಕಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ನಡೆದಿದೆ.
Advertisement
ಮಹಾರಾಷ್ಟ್ರದಿಂದ ಬಂದವರನ್ನು ಮೊದಲು 14 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಆ ಬಳಿಕ ಸ್ವಾಬ್ ಟೆಸ್ಟ್ ಗೆ ಕಳಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಸರ್ಕಾರದ ಆದೇಶದಂತೆ ವರದಿಗೂ ಮುನ್ನವೇ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಆದರೆ ಅವರ ವರದಿ ಪಾಸಿಟಿವ್ ಬಂದ ಕಾರಣಕ್ಕೆ ಮತ್ತೆ ಅವರನ್ನು ಕರೆತರಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂಗಳೇಶ್ವರಕ್ಕೆ ಹೋಗಿದ್ದರು. ಈ ವೇಳೆ ಅಜ್ಜಿ ಹಾಕಿದ ಅವಾಜ್ ಗೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಕೂಡ ತಬ್ಬಿಬ್ಬಾದ ಪ್ರಸಂಗ ನಡೆದಿದೆ.
Advertisement
Advertisement
ತಾಂಡಾದಲ್ಲಿನ ಮನೆಗೆ ಹೋಗುತ್ತಿದ್ದಂತೆ ಮನೆಯಲ್ಲಿದ್ದ ಅಜ್ಜಿ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ಅವರನನ್ನು ಒಯ್ಯಿರಿ, ಎರಡು ತಿಂಗಳು ಬಿಡಬೇಡಿ, ಅವರಿಗೇನು ಊಟ ಹಾಕ್ತಿರೋ ಹಾಕಿ. ನಿಮಗ ಯಾವ ಸೂ….. ಮಗಾ ಹೇಳ್ಯಾನೋ ಅವನನ್ನ ನಾನೇ ಕೊಲೆ ಮಾಡ್ತೀನಿ. ಅವನನ್ನ ಕೊಲೆ ಮಾಡಲಿಲ್ಲ ಅಂದ್ರ ನಮ್ಮ ಅಪ್ಪನಿಗೆ ನಾನು ಹುಟ್ಟಿಲ್ಲ ಎಂದು ತಿಳಕೋರಿ ಎಂದು ಅಜ್ಜಿ ಚಾಲೆಂಜ್ ಮಾಡಿದ್ದಾರೆ.
Advertisement
ನಮ್ಮ ತಲೆ ಮೇಲೆ ರೇವಣಸಿದ್ದೇಶ್ವರ ದೇವರಿದ್ದಾನೆ, ನಮಗೆ ಏನೂ ಆಗೋದಿಲ್ಲ. ನಮಗೆ ಸಾವು ಬರೋದಿಲ್ಲ, ಏನೂ ಆಗೋದಿಲ್ಲ. ಮಂದಿ ಮಾತು ಕೇಳಿ ನಮಗ ಒಯ್ಯಲು ಬಂದೀರಿ?, ಬರಲಿ ಕೊರೊನಾ ನಮಗ ಬರಲಿ ಎಂದು ಕೂಗಾಡಿದ್ದಾರೆ. ಅಲ್ಲದೆ ಅವರಿಗೇನಾದರೂ ಆದರೆ ನಿಮ್ಮನ್ನ ಕೊಲೆ ಮಾಡದೆ ಬಿಡೋದಿಲ್ಲ ಎಂದು ಅಜ್ಜಿ ಅವಾಜ್ ಹಾಕಿದ್ದಾರೆ.
ಕೊನೆಗೆ ಹರಸಾಹಸ ಪಟ್ಟು ಮನೆಯವರನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆತಂದು ದಾಖಲಿಸಿಕೊಂಡಿದ್ದಾರೆ.