– ಡಾ.ದಿವ್ಯಾ ಚಂದ್ರಾಧರ್ರಿಂದ ಸಿಎಂಗೆ ಹಸ್ತಾಂತರ
ಬೆಂಗಳೂರು: ಕೋವಿಡ್ ರೋಗವನ್ನು ಪಾಸಿಟಿವ್ ಅಥವಾ ನೆಗೆಟಿವ್ ಎಂದು ದೃಢೀಕರಿಸುವ ಮಿನಿ ಕಿಟ್ಗಳನ್ನು ಬೆಂಗಳೂರಿನ ಬಯೋಅಜೈಲ್ ಸಂಸ್ಥೆ ಸಿದ್ಧಪಡಿಸಿದೆ. ಈ ವೈರಲ್-ಆರ್ಎನ್ಎ ಮಿನಿ ಕಿಟ್ಗಳನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬಯೋಅಜೈಲ್ ಥೆರಪ್ಯೂಟಿಕ್ಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕಿ ಹಾಗೂ ಸಿಇಒ ಡಾ.ದಿವ್ಯಾ ಚಂದ್ರಾಧರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಿದರು. ಸಚಿವರಾದ ಬಸವರಾಜ್ ಬೊಮ್ಮಾಯಿ, ಬೈರತಿ ಬಸವರಾಜು, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
Advertisement
ವೈರಲ್-ಆರ್ಎನ್ಎ ಕಿಟ್ ಯಾಕೆ?: ಕೋವಿಡ್19 ಅಥವಾ ಕೊರೊನಾ ಪ್ರಕರಣಗಳ ಸಂಖ್ಯೆ ವಿಶ್ವದಾದ್ಯಂತ ತೀವ್ರಗತಿಯಲ್ಲಿ ಹೆಚ್ಚಳವಾಗಿದೆ. ಹೆಚ್ಚಿನ ಪ್ರಕರಣಗಳನ್ನು ಪರೀಕ್ಷಿಸುವುದು ಮತ್ತು ಸೋಂಕಿತರನ್ನು ಪ್ರತ್ಯೇಕವಾಗಿಸಿ ಚಿಕಿತ್ಸೆ ನೀಡುವುದು ಈ ಸಮಯದಲ್ಲಿ ತುಂಬಾ ಅವಶ್ಯಕವಾಗಿದೆ. ತುಂಬಾ ಸರಳವಾಗಿ ಈ ಕಿಟ್ ಬಳಸಿ ರೋಗ ಲಕ್ಷಣ ಪತ್ತೆಹಚ್ಚಬಹುದು ಹಾಗೂ ಬಯೋಅಜೈಲ್ ಮಿನಿ ಕಿಟ್ ಮಾರುಕಟ್ಟೆಯಲ್ಲಿರುವ ಇತರ ಹೆಸರಾಂತ ಬ್ರಾಂಡ್ಗಳಿಗಿಂತ ಶೇ.40ರಷ್ಟು ಕಡಿಮೆ ದರದಲ್ಲಿ ಸಿಗಲಿದೆ. ಇದು ಮೇಕ್ ಇನ್ ಇಂಡಿಯಾ ಉತ್ಪನ್ನ ಅನ್ನೋದು ಇದರ ವಿಶೇಷತೆ.
Advertisement
Advertisement
ಕ್ಷಿಪ್ರ ಪರೀಕ್ಷಾ ಕಿಟ್ಗಳು ವಿಶ್ವಾಸಾರ್ಹವಲ್ಲ ಮತ್ತು ಅವು ನೀಡುವ ಫಲಿತಾಂಶಗಳು ನಿಖರವಾಗಿಲ್ಲ, ತಪ್ಪು ಫಲಿತಾಂಶಗಳನ್ನು ಕೊಡುತ್ತಿವೆ ಎಂಬ ಆರೋಪಗಳೂ ಇವೆ. ಐಸಿಎಂಆರ್ ಪ್ರಕಾರ ಕೋವಿಡ್ ರೋಗವನ್ನು ಪಾಸಿಟಿವ್ ಅಥವಾ ನೆಗೆಟಿವ್ ಎಂದು ದೃಢೀಕರಿಸಲು ಆರ್.ಟಿ-ಪಿಸಿಆರ್ ಪರೀಕ್ಷೆಯೇ ಉತ್ತಮ ಗುಣಮಟ್ಟ ಪರೀಕ್ಷೆಯಾಗಿದೆ. ಬೆಂಗಳೂರಿನಲ್ಲಿರೋ ಬಯೋಅಜೈಲ್ ಸಿದ್ಧಪಡಿಸಿರುವ ವೈರಲ್-ಆರ್ಎನ್ಎ ಮಿನಿ ಕಿಟ್ ವಿಶ್ವಾಸಾರ್ಹ ಮತ್ತು ವೇಗವಾಗಿ ಪರೀಕ್ಷೆ ಮಾಡಲು ಸಹಕರಿಸುತ್ತದೆ.
Advertisement
ಡಾ. ದಿವ್ಯಾ ಚಂದ್ರಾಧರ್ ಬೆಂಗಳೂರು ಮೂಲದ ಯುವ ಉದ್ಯಮಿ ಮತ್ತು ಸಂಶೋಧಕಿಯಾಗಿದ್ದಾರೆ. ದಿವ್ಯಾ ಪ್ರಸ್ತುತ ಬಯೋಅಜೈಲ್ ಥೆರಪ್ಯೂಟಿಕ್ಸ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ. ಅಲ್ಲದೇ ಎಡಿಎಸ್ಒ ನ್ಯಾಚುರಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿದ್ದಾರೆ. 4 ವರ್ಷಗಳ ಹಿಂದೆ ದಿವ್ಯಾ ಅವರು ಪ್ರಾರಂಭಿಸಿದ ಬಯೋಅಜೈಲ್ ಥೆರಪ್ಯೂಟಿಕ್ಸ್ ಈಗ ಐಐಟಿ ಮತ್ತು ಬಾರ್ಕ್ನಂತಹ ಸರ್ಕಾರಿ ಸಂಸ್ಥೆಗಳೊಂದಿಗೆ ಸಹಯೋಗವನ್ನು ಪಡೆದುಕೊಂಡಿದೆ.