ಹೈದರಾಬಾದ್: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಭಾರತದ ಹಲವು ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದು. ರಾಜ್ಯದ ಚಿಕ್ಕ ಜಿಲ್ಲೆಗಳಲ್ಲಿ ಕೋವಿಡ್-19 ಸೋಕು ಹೆಚ್ಚಳವಾಗುತ್ತಿದ್ದರೂ ತೆಲಂಗಾಣ ರಾಜಕೀಯ ನಾಯಕರು ತಲೆಕೆಡಿಸಿಕೊಂಡಿಲ್ಲ.
Advertisement
ಸಾರ್ವಕನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸುವಂತೆ ಭಾನುವಾರ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಕೊರೊನಾ ನಿಯಮ ಉಲ್ಲಂಘಿಸುವವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆದರೆ ಈ ಆದೇಶ ಹೊರಡಿಸಿದ 24 ಗಂಟೆಗಳ ನಂತರ ತೆಲಂಗಾಣ ಕ್ಯಾಬಿನೆಟ್ನ ಇಬ್ಬರು ಮಂತ್ರಿಗಳು ಕೊರೊನಾ ನಿಯವನ್ನು ಉಲ್ಲಂಘಿಸಿದ್ದಾರೆ.
Advertisement
Advertisement
ತೆಲಂಗಾಣದ ಪಶುಸಂಗೋಪನಾ ಸಚಿವ ಟಿ. ಶ್ರೀನಿವಾಸ್ ಯಾದವ್ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ಶ್ರೀನಿವಾಸ್ ಗೌಡ್ರವರು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಅಭ್ಯರ್ಥಿ ನಾಗಾರ್ಜುನ್ ಸಾಗರ್ ಪರವಾಗಿ ಮತಪ್ರಚಾರ ನಡೆಸಿದರು. ಈ ವೇಳೆ ಇಬ್ಬರು ಮಂತ್ರಿಗಳು ರ್ಯಾಲಿ ವೇಳೆ ಮಾಸ್ಕ್ ಧರಿಸಿರಲಿಲ್ಲ. ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.
Advertisement
ಭಾನುವಾರ ತೆಲಂಗಾಣದಲ್ಲಿ 3,187 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಇದು ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾದ ದಿನವಾಗಿದೆ.