ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಆದರೆ ಇದೆಲ್ಲವನ್ನು ಮರೆತಿರುವಂತೆ ಕಾಣುತ್ತಿರುವ ಸಚಿವರಾದ ಶ್ರೀರಾಮುಲು, ಬಳ್ಳಾರಿ ಜಿಲ್ಲೆಯಲ್ಲಿ ನಡೆಯಲಿರುವ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
Advertisement
ಕೊರೊನಾ ಎರಡನೇ ಅಲೆ ದೇಶದಾದ್ಯಂತ ಜೋರಾಗಿರುವುದರಿಂದಾಗಿ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮದ ಪ್ರಕಾರ ಕೇವಲ ಐದೇ ಜನ ಸೇರಿಸಿ ಚುನಾವಣಾ ಪ್ರಚಾರ ಮಾಡುವಂತೆ ಸರ್ಕಾರ ಖಡಕ್ ಆದೇಶ ಕೊಟ್ಟಿದೆ. ಆದರೆ ಸರ್ಕಾರದ ಆದೇಶಕ್ಕೆ ಕ್ಯಾರೇ ಎನ್ನದ ರಾಮುಲು, ಬಳ್ಳಾರಿ ಪಾಲಿಕೆ ಚುನಾವಣೆ ಹಿನ್ನಲೆ ವಿವಿಧ ವಾರ್ಡ್ಗಳಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದು, ಪ್ರಚಾರದಲ್ಲಿ ನೂರಾರು ಜನರನ್ನು ಸೇರಿಸಿಕೊಂಡು ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.
Advertisement
ಮೊನ್ನೆಯಷ್ಟೇ ಜನ ಸಂದಣಿಯಲ್ಲಿ ರಾಮುಲು ಪ್ರಚಾರ ಮಾಡಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಮತ್ತೆ ಇವತ್ತು ಬಳ್ಳಾರಿಯ 16 ನೇ ವಾರ್ಡಿನಲ್ಲಿ ರಾಮುಲು ನೂರಾರು ಜನರನ್ನು ಸೇರಿಸಿಕೊಂಡು ಪ್ರಚಾರ ಮಾಡಿದ್ದಾರೆ. ನಿತ್ಯ ಬಳ್ಳಾರಿಯಲ್ಲಿ ಕರೊನಾ ಸ್ಫೋಟ ಅದ್ರೂ ಕೂಡ ಕೇರ್ ಮಾಡದೆ ರಾಮುಲು ಪ್ರಚಾರದಲ್ಲಿ ತೋಡಗಿಕೊಂಡಿರುವುದನ್ನು ಕಂಡ ಸಾರ್ವಜನಿಕರು ಸರ್ಕಾರ ಮಾಡಿದ ರೂಲ್ಸ್ ಗಳಿಗೆ ಸಚಿವರಿಂದಲೇ ಬೆಲೆ ಇಲ್ವ ಎಂದು ಪ್ರಶ್ನಿಸುವಂತಾಗಿದೆ.
Advertisement