– ಹಳೆ ಟಿವಿ, ರೆಡಿಯೋಗಳಲ್ಲಿಯ ರೆಡ್ ಮರ್ಕ್ಯೂರಿ ದಂಧೆ
ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೂರತ್ಕಲ್ ಹಾಗೂ ಉಜಿರೆ ಭಾಗದಿಂದ ಕಾರಿನಲ್ಲಿ 500 ಮುಖ ಬೆಲೆಯ ಐದು ಲಕ್ಷದ ಐವತ್ತು ಸಾವಿರ ನಕಲಿ ನೋಟುಗಳನ್ನ ಸಾಗಿಸುವಾಗ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಹಾಂದಿಯಲ್ಲಿ ನಡೆದಿದೆ. ಅಷ್ಟು ದೊಡ್ಡ ಮೊತ್ತದ ಹಣ ಸಿಕ್ಕಿದೆ ಅನ್ನೋದಕ್ಕಿಂತ ಆ ಹಣ ಎಲ್ಲಿಗೆ ಹೋಗುತ್ತಿತ್ತು ಅನ್ನೋದು ಅದಕ್ಕಿಂತ ಆಶ್ಚರ್ಯ ತಂದಿದೆ.
Advertisement
ಕಾರಿನಲ್ಲಿದ್ದ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ರೆಡ್ ಮಕ್ರ್ಯೂರಿ ಕೊಳ್ಳಲು ಹೋಗುತ್ತಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಚಿಕ್ಕಮಗಳೂರಿನ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಹಳೇ ಟಿವಿ, ರೆಡಿಯೋಗಳಲ್ಲಿ ರೆಡ್ ಮರ್ಕ್ಯೂರಿ ಲಿಕ್ವಿಡ್ಗಾಗಿ ಆರೋಪಿಗಳು ಈ ನಕಲಿ ಹಣದೊಂದಿಗೆ ಚಿಕ್ಕಮಗಳೂರಿಗೆ ಬರುತ್ತಿದ್ದರು. ಆರೋಪಿ ಸಂತೋಷ್ ನಿಮಗೆ ರೆಡ್ ಮರ್ಕ್ಯೂರಿ ಕೊಡಿಸೋ ಜವಾಬ್ದಾರಿ ನನ್ನದು, ಅದು ತುಂಬಾ ದುಬಾರಿ, ಹಾಗಾಗಿ ಹಣ ಅರೆಂಜ್ ಮಾಡಿ ಎಂದು ಮತ್ತೊಬ್ಬ ಆರೋಪಿ ನಜೀರ್ ಗೆ ಹೇಳಿದ್ದ.
Advertisement
Advertisement
ನಜೀರ್ ಕಸ್ಟಮರ್ ರೂಪದ ಮತ್ತೊಬ್ಬ ಆರೋಪಿ ಜುಬೇದ್ನಿಂದ ಹಣ ತರಲು ಮುಂದಾಗುತ್ತಾರೆ. ಜುಬೇದ್ ಮೇಲೆ ಮಂಗಳೂರಿನಲ್ಲಿ ಹಲವು ಕೇಸ್ಗಳು ಇವೆ. ಹತ್ತು ಲಕ್ಷಕ್ಕೆ ರೆಡ್ ಮರ್ಕ್ಯೂರಿ ಕೊಳ್ಳಲು ಸಿದ್ಧರಾಗಿ, ಹಣದೊಂದಿಗೆ ಚಿಕ್ಕಮಗಳೂರಿಗೆ ಬರುವಾಗ ಆಲ್ದೂರು ಬಳಿ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ರೆಡ್ ಮರ್ಕ್ಯೂರಿಗಾಗಿ ಚಿಕ್ಕಮಗಳೂರಿಗೆ ಬರುವಾಗ ಜುಬೇದ್, ರಿಯಾಜ್ ಕಾರನ್ನ ಹಿಂದಿರುಗಿಸಿಕೊಂಡು ನಾಪತ್ತೆಯಾಗುತ್ತಾರೆ. ಕೋಟಾ ನೋಟಿನೊಂದಿಗೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದ ನಜೀರ್ ಹಾಗೂ ಸಂತೋಷ್ ಐದು ಲಕ್ಷದ ಐವತ್ತು ಸಾವಿರ ನಕಲಿ 500 ಮುಖಬೆಲೆಯ ನೋಟಿನೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ರೆಡ್ ಮರ್ಕ್ಯೂರಿಯಿಂದ ಬಹಳ ಉಪಯೋಗವಿದೆ ಎಂದು ನಂಬಿ ಬಹಳ ಜನ ಹಣ ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರಿಗೆ ಬನ್ನಿ ರೆಡ್ ಮರ್ಕ್ಯೂರಿ ಕೊಡಿಸುತ್ತೇನೆ ಎಂದಿದ್ದ ಸಂತೋಷ್ ಸೇರಿದಂತೆ ರೆಡ್ ಮರ್ಕ್ಯೂರಿಗಾಗಿ ಬರುತ್ತಿದ್ದ ನಜೀರ್, ರಿಯಾಜ್, ಜುಬೇದ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
Advertisement
ಇತ್ತ ಮೂಡಿಗೆರೆಯಲ್ಲಿ ಅಪ್ಪನ ಜೊತೆ ಕಾಫಿ-ಮೆಣಸು-ಏಲಕ್ಕಿ ವ್ಯಾಪಾರ ಮಾಡುತ್ತಿದ್ದ ಪ್ರಮೋದ್ ಹಾಗೂ ತರಕಾರಿ ವ್ಯಾಪಾರ ಮಾಡುತ್ತಿದ್ದ ಶಕೀಲ್ ಎಂಬವರಿಗೆ ಕೊರೊನಾದಿಂದ ತೀವ್ರ ನಷ್ಟವಾಗಿತ್ತು. ಹಾಗಾಗಿ ನಕಲಿ ನೋಟ್ ಪ್ರಿಂಟ್ ಮಾಡಿ ಜನರನ್ನ ಯಾಮರಿಸಿ ನಷ್ಟ ಸರಿದೂಗಿಸಲು ಸಜ್ಜಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರೋ ಮೂಡಿಗೆರೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಬಂಧಿತರಿಂದ ನೋಟ್ ಪ್ರಿಂಟ್ ಮಾಡುತ್ತಿದ್ದ ಕಲರ್ ಜೆರಾಕ್ಸ್ ಮೆಷಿನ್ ಸೇರಿದಂತೆ ಇತರೆ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಇವರು ಅದಾಗಲೇ ಸುಮಾರು ಎ4 ಸೈಜಿನ 350 ಶೀಟ್ಗಳಲ್ಲಿ 2,000 ಮುಖಬೆಲೆಯ ನೋಟುಗಳನ್ನ ನಕಲಿಯಾಗಿ ಮುದ್ರಿಸಿ ಇಟ್ಟಿದ್ದರು. ಅವರನ್ನೂ ವಶಕ್ಕೆ ಪಡೆದಿರೋ ಪೊಲೀಸರು ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದಾರೆ.