ಕೋಲಾರ: ನಗರದಲ್ಲಿ ಕೊರೊನಾ ಆತಂಕದ ಮಧ್ಯೆ ಕಳ್ಳರ ಕೈಚಳಕ ಆರಂಭವಾಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಕೋಲಾರ ನಗರದ ಅರ್ಬನ್ ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಾಂಪ್ಲೆಕ್ಸ್ ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ಅದೃಷ್ಟವಶಾತ್ ಅರ್ಬನ್ ಬ್ಯಾಂಕ್ ಹೊರತುಪಡಿಸಿ ಉಳಿದಂತೆ ಮೆಡಿಕಲ್ ಸ್ಟೋರ್, ಡೆಂಟಲ್ ಕ್ಲಿನಿಕ್, ಟೈಲರ್ ಅಂಗಡಿ, ಫೈನಾನ್ಸ್ ಆಫೀಸ್ ಸೇರಿದಂತೆ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಅಂಗಡಿಗಳಲ್ಲಿ ಇದ್ದ ಸುಮಾರು 50 ಸಾವಿರ ರೂ. ನಗದನ್ನು ದೋಚಿರುವ ಕಳ್ಳರು ಅಂಗಡಿಗಳಲ್ಲಿದ್ದ ಕೆಲ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ.
Advertisement
Advertisement
ಇತ್ತೀಚೆಗಷ್ಟೇ ಕೋಲಾರ ನಗರದ ಜಯನಗರದ ಒಂದು ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಗನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದರು. ಆ ಪ್ರಕರಣ ಬೇಧಿಸುವ ಮೊದಲೇ ಮತ್ತೆ ಕಳ್ಳತನ ನಡೆದಿರುವುದು ನಗರದ ಜನರ ನಿದ್ದೆಗೆಡಿಸಿದೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅದಷ್ಟು ಬೇಗ ಕಳ್ಳರನ್ನು ಹಿಡಿದು, ಜನರಲ್ಲಿರುವ ಆತಂಕ ನಿವಾರಣೆ ಮಾಡುವ ಜೊತೆಗೆ ಕಳ್ಳತದ ಮಾಲನ್ನು ವಾಪಸ್ ಕೊಡಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಸಿದ್ದಾರೆ.