– ಕಿಸ್ಸಿಂಗ್ ಫೋಟೋಗಳು ವೈರಲ್
– ಜೋಡಿಯ ಚುಂಬನಕ್ಕೆ ಸಂಗೀತ ಕಲಾವಿದರ ಬೆಂಬಲ
ಮಾಸ್ಕೋ: ಸರ್ಕಾರ ವಿಧಿಸಿರುವ ಕೊರೊನಾ ಟಫ್ ರೂಲ್ಸ್ ವಿರೋಧಿಸಿ ಯುವ ಜೋಡಿ ಮೆಟ್ರೋ ರೈಲಿನಲ್ಲಿಯೇ ತುಟಿಗೆ ತುಟಿ ಸೇರಿಸಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ರಷ್ಯಾದ ಯೆಕಟೆರಿನ್ಬರ್ಗ್ ನಲ್ಲಿ ರೈಲಿನಲ್ಲಿ ಈ ಘಟನೆ ನಡೆದಿದೆ. ಜೋಡಿಯ ಕಿಸ್ಸಿಂಗ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Advertisement
ಸ್ಥಳೀಯ ವೆಬ್ಸೈಟ್ ಜೊತೆ ಮಾತಾಡಿರುವ ಜೋಡಿ, ಸಾರ್ವಜನಿಕವಾಗಿ ಕಿಸ್ ಮಾಡುವ ಮೂಲಕ ಯಾರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ನಮ್ಮಂತೆ ಹಲವು ಸಂಗೀತ ಕಲಾವಿದರು ಸರ್ಕಾರದ ಕೊರೊನಾ ಕಠಿಣ ನಿಯಮಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಗಾಗಿ ಬಹುತೇಕರು ನಮಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
Advertisement
Advertisement
ಸರ್ಕಾರದ ಪ್ರಕಾರ ಕನ್ಸರ್ಟ್, ಕ್ಲಬ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮಾತ್ರ ಕೊರೊನಾ ಹರಡುತ್ತದೆ. ಹಾಗಾಗಿ ನೈಟ್ ಕ್ಲಬ್ ಸೇರಿದಂತೆ ಹಲವು ಕಾರ್ಯಕ್ರಮಗಳ ಮೇಲೆ ನಿಷೇಧ ಹಾಕಿವೆ. ಈ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಬದುಕು ಕಟ್ಟಿಕೊಂಡಿದ್ದ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮೆಟ್ರೋ ರೈಲುಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಜನ ಸೇರಿದ್ರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಮಗೆ ಮಾತ್ರ ಯಾಕೆ ಈ ಕಠಿಣ ನಿಯಮಗಳು ಎಂದು ಕಿಸ್ಸಿಂಗ್ ಕಪಲ್ ಆಕ್ರೋಶ ಹೊರ ಹಾಕಿದ್ದಾರೆ.
Advertisement
ಕೊರೊನಾ ಮತ್ತು ಹೊಸ ರೂಪಾಂತರಿ ವೈರಸ್ ಹಿನ್ನೆಲೆ ಇಂಗ್ಲೆಂಡ್ ನಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತರಲಾಗಿದೆ. ರಾತ್ರಿ ಕಾರ್ಯನಿರ್ವಹಿಸುವ ಮ್ಯೂಸಿಕಲ್ ಇವೆಂಟ್, ಪಬ್ ಗಳ ಮೇಲೆ ನಿಷೇಧ ಹಾಕಲಾಗಿದೆ. ಬೆಳಗ್ಗೆ ಇಲ್ಲದ ರೂಲ್ಸ್ ಗಳು ರಾತ್ರಿ ಮಾತ್ರ ಏಕೆ ಎಂದು ಸಂಗೀತ ಕಲಾವಿದರರು ಪ್ರಶ್ನಿಸುತ್ತಿದ್ದಾರೆ.