ಬೆಂಗಳೂರು: ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ.
ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್ ದತ್ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕನ್ಫ್ಯೂಸ್ ಆಗಬೇಡಿ. ಬೊಮ್ಮನಹಳ್ಳಿಯ ಬಿಬಿಎಂಪಿಯವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಆಧೀರನನ್ನು ಬಳಸಿದ್ದಾರೆ. ಕೆಜಿಎಫ್ ಚಿತ್ರದ ಅಧೀರ ರುಮಾಲಿನ ಬಟ್ಟೆಯಿಂದ ಬಾಯಿ ಮುಚ್ಚಿಕೊಂಡಿರುವ ಫೋಟೋ ಹಾಕಿ, ಮಾಸ್ಕ್ ಹಾಕಿಕೊಳ್ಳಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನೋಡಿ ಅಧೀರನು ಕೂಡ ಮಾಸ್ಕ್ ಹಾಕಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ
Advertisement
https://twitter.com/vkiragandur/status/1288672451245686785?s=21
Advertisement
ಈ ಟ್ವೀಟ್ ಕಂಡು ಖುಷಿಯಾದ ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ರೀಟ್ವೀಟ್ ಮಾಡಿದ್ದು, ಅಧೀರ ಕೆಜಿಎಫ್ ಚಿತ್ರದಲ್ಲಿ ಖಳನಾಯಕನಾಗಿರಬಹುದು. ಆದರೆ ಆತನೂ ಕೂಡ ಕೊರೊನಾ ವೈರಸ್ ವಿರುದ್ಧ ಒಳ್ಳೆಯ ಜಾಗೃತಿಯನ್ನು ಮೂಡಿಸುತ್ತಿದ್ದಾನೆ. ಹೌದು ಮಾಸ್ಕ್ ಧರಿಸಿ, ನಿಮ್ಮನ್ನು ನೀವು ಕಾಪಾಡಿಕೊಳ್ಳುವುದರ ಜೊತೆ ನಿಮ್ಮ ಸುತ್ತಮುತ್ತಲಿರುವ ಜನರನ್ನು ಕಾಪಾಡಿ. ಬನ್ನಿ ಇಡೀ ಜಗತ್ತನ್ನೆ ಸುರಕ್ಷಿತವಾಗಿ ಮಾಡೋಣ. ಒಳ್ಳೆ ಆಯ್ಕೆ ಬೊಮ್ಮನಹಳ್ಳಿ ಬಿಬಿಎಂಪಿ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಇಡೀ ಭಾರತವೇ ಕೆಜಿಎಫ್-2 ಚಿತ್ರದ ಬಿಡುಗಡೆಗೆ ಕಾಯುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ಬರುವ ಅಧೀರನ ಪಾತ್ರವೂ ಅಷ್ಟೇ ಕುತೂಹಲವನ್ನು ಹುಟ್ಟುಹಾಕಿದೆ. ಈ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಅವರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದೆ. ಕಳೆದ ಬುಧವಾರ ಸಂಜಯ್ ದತ್ ಅವರ ಹುಟ್ಟು ಹಬ್ಬದ ಪ್ರಯಕ್ತ ಕೆಜಿಎಫ್ ಚಿತ್ರತಂಡ ಅಧೀರನ ಇನ್ನೊಂದು ಹೊಸ ಲುಕ್ ಅನ್ನು ಬಿಡುಗಡೆ ಮಾಡಿದೆ. ಕ್ರೂರತ್ವಕ್ಕೆ ಹಿಡಿದ ಕೈಗನ್ನಡಿಯಂತಿರುವ ಅಧೀರನ ಇನ್ನೊಂದು ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.