ಧಾರವಾಡ: ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಕೋವಿಡ್ ಕಾಳಜಿ ಕೇಂದ್ರದಲ್ಲಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದವರಿಗೆ ಗುಲಾಬಿ ನೀಡಿ ಬೀಳ್ಕೊಡುಗೆ ನೀಡಲಾಗಿದೆ. ಹಿರೇಹೊನ್ನಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ವಿದ್ಯಾರ್ಥಿ ನಿಲಯವನ್ನು ಕೋವಿಡ್ ಕಾಳಜಿ ಕೇಂದ್ರವನ್ನಾಗಿ ಮಾಡಲಾಗಿದೆ.
Advertisement
ಜಾರ್ಖಂಡ್ ಮೂಲದ ಓರ್ವ ಹಾಗೂ ಹಿರೇಹೊನ್ನಳ್ಳಿ ಗ್ರಾಮದ ಎಂಟು ಜನರು ಗುಣಮುಖರಾಗಿದ್ದು, ಡಿಸ್ಚಾರ್ಜ್ ಆದರು. ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗುಲಾಬಿ ಹೂ ನೀಡಿ, ಚಪ್ಪಾಳೆ ತಟ್ಟಿ ಹರ್ಷದಿಂದ ಬೀಳ್ಕೊಟ್ಟರು. ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿಗೆ ಕೈ ಮುಗಿದು ಗುಣಮುಖರು ತಮ್ಮ ಮನೆಗಳಿಗೆ ಹಿಂದಿರುಗಿದರು.
Advertisement
Advertisement
ಹಿರೇಹೊನ್ನಳ್ಳಿಯ ಕೋವಿಡ್ ಕಾಳಜಿ ಕೇಂದ್ರದಲ್ಲಿ 100 ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, 17 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಳಜಿ ಕೇಂದ್ರಕ್ಕೆ ಆಗಮಿಸುವ ಸೋಂಕಿತರಿಗೆ ಮನೆಯವರಂತೆ ಪ್ರೀತಿಯಿಂದ ಕಾಣುವ ಮತ್ತು ಗುಣಮುಖರಾದ ಸೋಂಕಿತರನ್ನು ಖುಷಿಯಿಂದ ಹೋಗುವಂತೆ ನೋಡಿಕೊಳ್ಳಲಾಗುತ್ತಿದೆ.