ಬೆಂಗಳೂರು: ಕೊರೊನಾದಿಂದ ಸಿಎಂ ಯಡಿಯೂರಪ್ಪನವರು ಗುಣಮುಖರಾಗಿದ್ದು ಇಂದು ಸಂಜೆ ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ಬಳಿಕ ಮುಖ್ಯಮಂತ್ರಿಗಳು ಎರಡನೇ ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಇಂದು ಬೆಳಗ್ಗೆ ವರದಿ ನೆಗೆಟಿವ್ ಬಂದಿದೆ. ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಡಿಯೂರಪ್ಪನವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಡಿಸ್ಚಾರ್ಜ್ ಮಾಡಬಹುದು ಎಂದು ವೈದ್ಯರು ತಿಳಿಸಿದ್ದರು.
Advertisement
Advertisement
ಕೊರೊನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಿಎಂ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತ ಇದೆ ಎಂಬ ಮಾಹಿತಿ ಮೊದಲು ಲಭ್ಯವಾಗಿತ್ತು. ಆದರೆ ಈಗ ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ಬಿಎಸ್ವೈ ನೇರವಾಗಿ ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ.
Advertisement
Advertisement
ಆ.16ರವರೆಗೆ ಹೋಂ ಕ್ವಾರಂಟೈನ್:
ಬಿಬಿಎಂಪಿ, ಆರೋಗ್ಯ ಇಲಾಖಾ ಅಧಿಕಾರಿಗಳು ಆಗಸ್ಟ್ 4 ರಂದು ಸಿಎಂ ಕಚೇರಿ ಮತ್ತು ಮನೆಯ ಮುಂದೆ ಆ. 2 ರಿಂದ 16 ರವರೆಗೂ ಪ್ರವೇಶ ನಿರಾಕರಣೆ ಮಾಡಿ ಪೋಸ್ಟರ್ ಅಂಟಿಸಿದ್ದಾರೆ. ಆಗಸ್ಟ್ 16 ರವರೆಗೂ ಸಿಎಂ ಬಿಎಸ್ ಯಡಿಯೂರಪ್ಪ ಹೋಂ ಕ್ವಾರಂಟೈನ್ ಹಿನ್ನೆಲೆಯಲ್ಲಿ ಯಾರಿಗೂ ಪ್ರವೇಶವಿಲ್ಲ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಸಿಎಂಗಾಗಿ ಹೋಮ್ ಕ್ವಾರಂಟೈನ್ ನಿಯಮ ಬದಲಾಗುತ್ತಾ?