ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಕೊರೊನಾ ಟೆಸ್ಟ್ ಮಾಡಿಸುವಂತೆ ‘ದೊಣ್ಣೆ ನಾಯಕರು’ ಎಂಟ್ರಿ ಕೊಟ್ಟಿದ್ದಾರೆ.
ಹೌದು. ಬೆಂಗಳೂರಿನಲ್ಲಿ ಟಾರ್ಗೆಟ್ ಟಾರ್ಚರ್ ಗೆ ಫೀಲ್ಡ್ ವಾರಿಯರ್ಸ್ ನಯಾ ಐಡಿಯಾವೊಂದನ್ನು ಹುಡುಕಿಕೊಂಡಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಬಾರದ ಜನರ ಮೇಲೆ ಬಿಬಿಎಂಪಿ ದೊಣ್ಣೆ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ.
Advertisement
Advertisement
ಬಸ್ ಸ್ಟ್ಯಾಂಡ್ ಗಳಲ್ಲಿ ಟೆಂಟ್ ಹಾಕಿಕೊಂಡು, ದೊಣ್ಣೆ ಇಟ್ಕೊಂಡೇ ಸಿಬ್ಬಂದಿ ಜನಸಾಮಾನ್ಯರನ್ನು ಗುಡ್ಡೆ ಹಾಕಿ ಟೆಸ್ಟಿಂಗ್ ಗೆ ಕರೆದೊಯ್ಯುತ್ತಿದ್ದಾರೆ. ಬಿಎಂಟಿಸಿ ಬಸ್ಸಿನಲ್ಲಿ ಇಳಿದ ಒಬ್ಬರನ್ನೂ ಬಿಡುತ್ತಿಲ್ಲ. ಟಾರ್ಗೆಟ್ ರೀಚ್ ಟಾರ್ಚರ್ ಗೆ ಈಗ ಸಿಬ್ಬಂದಿ ಬಸ್ ನಲ್ಲಿ ಬರೋ ಪ್ರಯಾಣಿಕರ ಮೇಲೆ ಕಣ್ಣು ಹಾಕಿದ್ದಾರೆ. ಕೆ.ಆರ್ ಮಾರ್ಕೆಟ್ ನಲ್ಲಿ ಬಸ್ ಇಳಿಯೋದೇ ತಡ ದೊಣ್ಣೆ ಇಟ್ಕೊಂಡು ಜನರ ಬಳಿ ಸಿಬ್ಬಂದಿ ಬಂದು ಕೊರೊನಾ ಟೆಸ್ಟ್ ಮಾಡಿಸುವಂತೆ ತಾಕೀತು ಮಾಡುತ್ತಾರೆ. ಟೆಸ್ಟಿಂಗ್ ಮಾಡಲ್ಲ ಅಂದ್ರೆ ಸಿಬ್ಬಂದಿ ಅವಾಜ್ ಹಾಕುತ್ತಾರೆ.
Advertisement
Advertisement
ದೊಣ್ಣೆ ಇಟ್ಕೊಂಡು ಬರೋ ಸಿಬ್ಬಂದಿ ನೋಡಿಯೇ ಜನ ಭಯದಿಂದ ಟೆಸ್ಟ್ ಮಾಡಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಒಟ್ಟಿನಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳೋಕೆ ಜನ ಹಿಂದೇಟು ಹಾಕುವ ಬೆನ್ನಲ್ಲೇ ಈಗ ಹೊಸ ಪ್ಲಾನ್ ರೂಪಿಸಿದ್ದಾರೆ.