– ಜೋಡಿಯ ‘ಗಡಿ’ಬಿಡಿಯ ಕಲ್ಯಾಣ
ತಿರುವನಂತಪುರ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜೋಡಿಯೊಂದು ಎರಡು ರಾಜ್ಯಗಳ ಗಡಿಯಲ್ಲಿಯೇ ಭಾನುವಾರ ಮದುವೆಯಾಗಿದೆ.
Advertisement
ರಾಬಿನ್ಸನ್ ಮತ್ತು ಪ್ರಿಯಾಂಕ ಗಡಿಯಲ್ಲಿ ಮದುವೆಯಾದ ಜೋಡಿ. ಇಬ್ಬರ ಮದುವೆ ಮಾರ್ಚ್ 22ರಂದು ಗುರುಹಿರಿಯರು ನಿಶ್ಚಯಿಸಿದ್ದರು. ಮಾರ್ಚ್ 21ರಂದು ಜನತಾ ಕರ್ಫ್ಯೂ ಹಿನ್ನೆಲೆ ಮದುವೆ ಮುಂದೂಡಲಾಗಿತ್ತು. ತದನಂತರ ಲಾಕ್ಡೌನ್ ಘೋಷಣೆ ಆಗಿದ್ದರಿಂದ ಮದುವೆ ದಿನಾಂಕವನ್ನು ಎರಡು ಕುಟುಂಬಗಳು ಮುಂದೂಡತ್ತಲೇ ಬಂದಿದ್ದವು.
Advertisement
Advertisement
ಪ್ರಿಯಾಂಕ ಕೇರಳದವರಾಗಿದ್ದು, ರಾಬಿನ್ಸನ್ ತಮಿಳುನಾನ ನಿವಾಸಿ. ಅನ್ಲಾಕ್ ಘೋಷಣೆ ಬಳಿಕ ಪ್ರಿಯಾಂಕ ತಮಿಳುನಾಡಿನ ಗಡಿವರೆಗೆ ಬರುವ ಪಾಸ್ ಪಡೆದುಕೊಂಡಿದ್ದರು. ಇತ್ತ ರಾಬಿನ್ಸನ್ ಸಹ ಕೇರಳದ ಗಡಿವರೆಗೆ ಬರಲು ಪ್ರಯಾಣದ ಪಾಸ್ ಪಡೆದಿದ್ದರು. ಎರಡೂ ರಾಜ್ಯಗಳನ್ನು ಸಂಪರ್ಕಿಸುವ ಚಿನ್ನಾರ್ ಸೇತುವೆಯಲ್ಲಿ ಕಲ್ಯಾಣ ನಡೆದಿದೆ. ಎರಡು ಕುಟುಂಬದವರು ಸೇರಿ ಕೇವಲ 12 ಮಂದಿ ಕಲ್ಯಾಣಕ್ಕೆ ಹಾಜರಾಗಿದ್ದರು. ಜೊತೆಗೆ ಅರಣ್ಯಾಧಿಕಾರಿಗಳು, ಪೊಲೀಸರು ಮತ್ತು ಮಾಜಿ ಶಾಸಕ ಎ.ಕೆ.ಮಣಿ ಉಪಸ್ಥಿತರಿದ್ದರು.
Advertisement
ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಯಾರ ಮನೆಗೆ ಬರುವಂತಿರಲಿಲ್ಲ. ಮದುವೆಗಾಗಿ ಜೋಡಿಯ ಎರಡೂ ಕುಟುಂಬಗಳು ಸ್ಥಳೀಯ ಅಧಿಕಾರಿಗಳಲ್ಲಿ ಅನುಮತಿಯನ್ನ ಕೇಳಿದ್ದವು. ಆದ್ರೆ ಎಲ್ಲರಿಗೂ ಪ್ರಯಾಣದ ಅನುಮತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜೋಡಿ ಕುಟುಂಬಸ್ಥರು ಮತ್ತು ಸ್ಥಳೀಯ ಪೊಲೀಸರ ಸಮ್ಮತಿಯ ಮೇರೆ ಗಡಿಭಾಗದಲ್ಲಿಯೇ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ದೇವಿಕುಲಂ ಕ್ಷೇತ್ರದ ಮಾಜಿ ಶಾಸಕ ಎ.ಕೆ.ಮಣಿ ಹೇಳಿದ್ದಾರೆ.
Kerala: An inter-state couple tied knot at Chinnar bridge connecting Kerala & Tamil Nadu in Idukki y'day. "Bride is from Kerala & groom from Tamil Nadu. Since all family members could not travel for wedding, it was decided to conduct at border," says AK Mani, former Devikulam MLA pic.twitter.com/z6CxEUHkBc
— ANI (@ANI) June 8, 2020