ಚೆನ್ನೈ: ತಮಿಳುನಾಡಿನಲ್ಲಿ ಮೀತಿ ಮೀರಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಚೆನ್ನೈ ಸೇರಿದಂತೆ ನಾಲ್ಕು ನಗರಗಳಲ್ಲಿ ಲಾಕ್ಡೌನ್ ಮಾಡಲಾಗುವುದು ಎಂದು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.
ಚೆನೈ, ಕಾಂಚೀಪುರಂ, ಚೆಂಗಲ್ಪಟ್ಟು, ತಿರುವಲ್ಲೂರನಲ್ಲಿ ಜೂನ್19ರಿಂದ 30ರವರೆಗೆ ಕಟ್ಟುನಿಟ್ಟಿನ ಲಾಕ್ಡೌನ್ ಮಾಡಲು ನಿರ್ಧರಿಸಿದ್ದು, ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸೀಮಿತ ಲಾಕ್ಡೌನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement
Advertisement
ಜೂನ್ 19 ರಿಂದ ಲಾಕ್ಡೌನ್ ಜಾರಿಯಾಗಲಿದ್ದು ತುರ್ತು ಅವಶ್ಯಕ ಅಂಗಡಿಗಳನ್ನು ಹೊರತುಪಡಿಸಿ ಎಲ್ಲ ಮಾದರಿಯ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದೆ. ಹಣ್ಣು ತರಕಾರಿ, ದಿನಸಿ ಅಂಗಡಿಗಳು ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೂ ಮಾತ್ರ ತೆರೆಯಲು ಅವಕಾಶ ನೀಡಿದೆ. ಜನರು ತಮ್ಮ ನಿವಾಸ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ವಸ್ತುಗಳು ಖರೀದಿಗೆ ಸಂಚರಿಸಿಬೇಕು ಎನ್ನುವ ನಿಯಮ ಹೇರಿದೆ.
Advertisement
ತುರ್ತು ಪರಿಸ್ಥಿತಿಗಳಿಗೆ ಮಾತ್ರ ಆಟೋ, ಟ್ಯಾಕ್ಸಿ ಸೇವೆಗಳು ಅನುವು ಮಾಡಿಕೊಡಲಾಗಿದೆ. ಹೋಟೆಲ್ ತೆರೆಯಲು ಅವಕಾಶ ನೀಡಿದ್ದು, ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅವಕಾಶ ಇರಲಿದೆ. ಮನೆಗಳಿಗೆ ಫುಡ್ ಡೆಲಿವರಿ ಮಾಡಲು ಅವಕಾಶ ನೀಡಿದ್ದು, ಇದಕ್ಕಾಗಿ ವಿಶೇಷ ಇ-ಪಾಸ್ ಗಳನ್ನು ಪಡೆಯುವಂತೆ ಸೂಚಿಸಿಲಾಗಿದೆ.
Advertisement
ಲಾಕ್ಡೌನ್ ಅವಧಿಯಲ್ಲಿ ಬರುವ ಎರಡು ಭಾನುವಾರ ಯಾವುದೇ ವಿನಾಯತಿಗಳು ನೀಡದೇ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಿದೆ. ಇನ್ನು ಕಂಟೈನ್ಮೆಂಟ್ ಝೋನ್ ಗಳಲ್ಲಿ ಪೂರ್ಣ ಪ್ರಮಾಣದ ಲಾಕ್ಡೌನ್ ಇರಲಿದ್ದು ಯಾವುದೇ ವಿನಾಯತಿಗಳಿಲ್ಲ. ಇನ್ನು ರೈಲು ಮತ್ತು ವಿಮಾನಗಳ ಹಾರಾಟ ಎಂದಿನಂತೆ ಇರಲಿದ್ದು ಅಮ್ಮ ಕ್ಯಾಂಟಿನ್ ತೆರೆಯಲು ಅವಕಾಶ ನೀಡಿದೆ. ಕಟ್ಟಡ ಕಾಮಗಾರಿ ಮುಂದುವರಿಸಬಹುದಾಗಿದ್ದು ಕಾರ್ಮಿಕರಿಗೆ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು. ಬ್ಯಾಂಕ್ ಕೋರ್ಟ್ ಹಾಗೂ ಮಾಧ್ಯಮಗಳು ಸಾಮಾನ್ಯ ಕಾರ್ಯ ನಿರ್ವಹಿಸಬಹುದಾಗಿದೆ.
ಈ ನಡುವೆ ಲಾಕ್ಡೌನ್ ಮಾಡುವ ಯಾವುದೇ ಪ್ರಸ್ತಾಪಗಳು ಸರ್ಕಾರದ ಮುಂದಿಲ್ಲ. ಗಾಳಿ ಸುದ್ದಿಗೆ ಕಿವಿಗಿಡದಂತೆ ಗುಜರಾತ್ ಸಿಎಂ ವಿಜಯ್ ರೂಪಾನಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜನರಿಗೆ ಮನವಿ ಮಾಡಿದ್ದಾರೆ.