– ಹಂದಿಯಿಂದ ಮಾನವನಿಗೆ ಹರಡುತ್ತದೆ ವೈರಸ್
– ನಿಯಂತ್ರಿಸದಿದ್ದರೆ ಕೋವಿಡ್-19ಗಿಂತಲೂ ಅಪಾಯಕಾರಿ
ಬೀಜಿಂಗ್: ಈಗಾಗಲೇ ಜಗತ್ತನ್ನೇ ಲಾಕ್ಡೌನ್ ಮಾಡಿ ಸಮಸ್ಯೆ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಮಧ್ಯೆ ಈಗ ಚೀನಾದಲ್ಲಿ ಮತ್ತೊಂದು ವೈರಸ್ ಸೃಷ್ಟಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
Advertisement
ಹೌದು. ಸಾಕಾಣಿಕಾ ಕೇಂದ್ರದಲ್ಲಿರುವ ಹಂದಿಗಳಲ್ಲಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ. ಈ ಜ್ವರದ ವೈರಸ್ ಹಂದಿಗಳಿಂದ ಮನುಷ್ಯನಿಗೆ ಬಳಿಕ ಮನುಷ್ಯನಿಂದ ಮನುಷ್ಯನಿಗೆ ಹರಡುವ ಎಲ್ಲ ಲಕ್ಷಣಗಳು ಇವೆ ಎಂದು ಸಂಶೋಧಕರು ತಿಳಿಸಿದ್ದಾರೆ.
Advertisement
Advertisement
ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಸಂಶೋಧಕರು, ಈ ಹಂದಿ ಜ್ವರವನ್ನು ನಿಯಂತ್ರಿಸದೇ ಇದ್ದರೆ ಕೋವಿಡ್ 19ನಂತೆ ಮತ್ತೊಂದು ಸಾಂಕ್ರಮಿಕ ರೋಗವಾಗುವ ಅಥವಾ ಇದಕ್ಕಿಂತಲೂ ಭೀಕರ ಪರಿಣಾಮ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
Advertisement
ಸಂಶೋಧಕರಾದ ಜಾರ್ಜ್ ಗಾವೋ ಮತ್ತು ಜಿನ್ಹುವಾ ಲಿಯು ನೇತೃತ್ವದ ತಂಡ 2011 ರಿಂದ 2018ರವರೆಗೆ 10 ಪ್ರಾಂತ್ಯಗಳ ಹಂದಿಗಳಿಂದ 179 ವೈರಸ್ಗಳನ್ನು ಪತ್ತೆ ಹಚ್ಚಿದ್ದರು.
ಈ ಅಪಾಯಕಾರಿ ವೈರಸ್ಗೆ ಜಿ4ಇಎ ಎಂದು ಹೆಸರನ್ನು ಇರಿಸಲಾಗಿದೆ. 2016ರಲ್ಲಿ 46 ವರ್ಷದ ವ್ಯಕ್ತಿಯಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದ್ದರೆ ನಂತರ 2019ರಲ್ಲಿ 9 ವರ್ಷದ ಬಾಲಕನಲ್ಲಿ ವೈರಸ್ ಕಂಡು ಬಂದಿದೆ.
ಈ ಇಬ್ಬರು ರೋಗಿಗಳು ಹಂದಿ ಸಾಕಾಣಿಕೆ ಮಾಡುವ ನೆರೆಹೊರೆಯವರನ್ನು ಹೊಂದಿದ್ದರು. ಇಬ್ಬರಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದ ಕಾರಣ ವೈರಸ್ ಹರಡಿರಬಹುದು. ಈ ರೀತಿಯಾಗಿ ಸೃಷ್ಟಿಯಾಗುವ ವೈರಸ್ಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಜ್ವರ, ಸೀನುವುದು, ಕೆಮ್ಮು, ಕಫ ಈ ಸಾಮಾನ್ಯ ಲಕ್ಷಣಗಳು ಇದರಲ್ಲೂ ಇದೆ. 2016ರ ನಂತರ ಅತಿ ಹೆಚ್ಚು ಸಂಖ್ಯೆ ವೈರಸ್ ಪತ್ತೆಯಾಗಿದೆ. 15 ಹಂದಿ ಸಾಕಾಣಿಕಾ ಕೇಂದ್ರದಲ್ಲಿರುವ 30 ಸಾವಿರ ಹಂದಿಗಳ ಮೂಗಿನಿಂದ ಸ್ವಾಬ್ಗಳನ್ನು ತೆಗೆದು ಅಧ್ಯಯನ ಮಾಡಲಾಗಿದೆ. ಶೇ. 10.4 ರಷ್ಟು ಜನ ಮಾತ್ರ ಈ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ(ಆಂಟಿಬಾಡಿಸ್) ಹೊಂದಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಈ ವೈರಸ್ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಹಂದಿ ಸಾಕಾಣಿಕೆ ಸಾಕಾಣಿಕೆಯನ್ನು ಏಷ್ಯಾದಲ್ಲಿ ಹೆಚ್ಚಿನ ಕಡೆಗಳಲ್ಲಿ ಮಾಡಲಾಗುತ್ತಿದೆ. ಅದರಲ್ಲೂ ವಿಶ್ವದ ಅರ್ಧಕ್ಕೂ ಹೆಚ್ಚು ಹಂದಿ ಸಾಕಾಣಿಕಾ ಕೇಂದ್ರ ಚೀನಾದಲ್ಲಿದೆ. ನೈರ್ಮಲ್ಯ ಕಡಿಮೆಯಾಗಿರವುದರ ಜೊತೆಗೆ ಹಂದಿಗಳಿಗೆ ನೀಡುವ ಆಹಾರದಲ್ಲಿ ಬದಲಾವಣೆಯಾಗಿದೆ. ವಿಶೇಷವಾಗಿ ಸ್ಟೀರಾಯ್ಡ್ಗಳನ್ನು ನೀಡುವುದಿಂದ ದೇಹದಲ್ಲಿ ಬದಲಾವಣೆಯಾಗಿ ಈ ವೈರಸ್ಗಳು ಸೃಷ್ಟಿಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಹಂದಿ ಸಾಕಾಣಿಕಾ ಕೇಂದ್ರದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮತ್ತು ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಈಗಲೇ ನಿಗಾ ಇಡದೇ ಇದ್ದರೆ ಭವಿಷ್ಯದಲ್ಲಿ ಜಾಗತಿಕವಾಗಿ ಈ ರೀತಿಯ ವೈರಸ್ ಹರಡಬಹುದು ಎಂದು ಸಂಶೋಧಕರು ಅಭಿಪ್ರಾಯ ತಿಳಿಸಿದ್ದಾರೆ. ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಜರ್ನಲ್ನಲ್ಲಿ ಚೀನಾ ಸಂಶೋಧಕರ ಅಧ್ಯಯನ ವರದಿ ಪ್ರಕಟವಾಗಿದೆ.