ಬೆಂಗಳೂರು: ಕೊರೊನಾ 3ನೇ ಅಲೆ ಆತಂಕದ ಮಧ್ಯೆ ಶಿಕ್ಷಣ ಇಲಾಖೆ 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ ಮಾಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಡೀ ವರ್ಷದ ವೇಳಾಪಟ್ಟಿ ಪ್ರಕಟವಾಗಿದ್ದು, ಈ ವರ್ಷ ಜುಲೈ 1 ರಿಂದ ಮುಂದಿನ ವರ್ಷ ಅಂದ್ರೆ 2022ರ ಏಪ್ರಿಲ್ 30ವರೆಗೆ ಶಾಲೆಗಳು ನಡೆಯಲಿದೆ.
2021-22 ನೇ ಸಾಲಿನಲ್ಲಿ ಸುಮಾರು 223 ದಿನಗಳು ಬೋಧನೆ ಲಭ್ಯವಾಗಲಿವೆ. ಈ ವರ್ಷ 10 ದಿನ ದಸರಾ ರಜೆ, 27 ದಿನ ಬೇಸಿಗೆ ರಜೆ ವಿದ್ಯಾರ್ಥಿಗಳಿಗೆ ಸಿಗಲಿದೆ. ದಾಖಲಾತಿ ಪ್ರಕ್ರಿಯೆ ಜೂನ್ 15 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 30ರ ಒಳಗೆ ದಾಖಲಾತಿ ಪ್ರಕ್ರಿಯೆ ಮುಗಿಸಲು ಇಲಾಖೆ ಸೂಚನೆ ನೀಡಿದೆ.
Advertisement
Advertisement
ಶಿಕ್ಷಣ ಇಲಾಖೆ ನೀಡಿರುವ ವೇಳಾಪಟ್ಟಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯ ಆಗಲಿದೆ. ವೇಳಾಪಟ್ಟಿ ತಾತ್ಕಾಲಿಕವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ವೇಳಾಪಟ್ಟಿ ಬದಲಾವಣೆ ಆಗುವ ಸಾಧ್ಯತೆ ಇದೆ. ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸರ್ಕಾರ ನಿಗದಿಪಡಿಸಿದ ವಿವಿಧ ಜಯಂತಿಗಳನ್ನು ಆಚರಣೆ ಮಾಡಲು ಸೂಚನೆ ನೀಡಲಾಗಿದೆ. ಕ್ರಿಸ್ಮಸ್ ರಜೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಬೋಧನಾ ಕಲಿಕೆಗೆ ಸಮಸ್ಯೆ ಆಗದಂತೆ ವೇಳಾಪಟ್ಟಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
Advertisement
Advertisement
ವೇಳಾಪಟ್ಟಿ
– ಜುಲೈ 1 ರಿಂದ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಪ್ರಾರಂಭ ಆಗಲಿವೆ.
– ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭ ಆಗಲಿದ್ದು, ಆಗಸ್ಟ್ 30 ಒಳಗೆ ದಾಖಲಾತಿ ಪ್ರಕ್ರಿಯೆ ಮುಕ್ತಾಯ ಮಾಡಬೇಕು.
– ಶಾಲೆಗಳ ಮೊದಲ ಅವಧಿ – ಜುಲೈ 1 ರಿಂದ ಅಕ್ಟೋಬರ್ 9 ನಡೆಯಲಿದೆ.
– ಎರಡನೇ ಅವಧಿ – ಅಕ್ಟೋಬರ್ 21 ರಿಂದ ಏಪ್ರಿಲ್ 30, 2022ರವರೆಗೆ ನಡೆಯಲಿದೆ.
– ದಸರಾ ರಜೆ- ಅಕ್ಟೋಬರ್ 10 ರಿಂದ ಅಕ್ಟೋಬರ್ 20 ನಿಗಧಿ ಮಾಡಲಾಗಿದೆ.
– ಬೇಸಿಗೆ ರಜೆ – 2022 ಮೇ 1 ರಿಂದ ಮೇ 28ವರೆಗೆ ನಿಗಧಿ ಮಾಡಲಾಗಿದೆ.