ಬೆಂಗಳೂರು: ಕೊರೊನಾ ಜುಲೈ ತಿಂಗಳಲ್ಲಿ 48,775 ಕೇಸ್ ದಾಟಿದೆ. ಏಪ್ರಿಲ್, ಮೇ, ಜೂನ್ಗಿಂತ ಜುಲೈನಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ನಿತ್ಯ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಶರವೇಗವಾಗಿ ಹೆಚ್ಚಳವಾಗುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕೊರೊನಾ ಸೋಂಕಿನ ಹರಡುವಿಕೆ ಹೆಚ್ಚಾಗುವ ಸೂಚನೆ ಲಭಿಸಿರುವುದರಿಂದ ಆಗಸ್ಟ್ ಬಿಗ್ ಚಾಲೆಂಜ್ ಎದುರಿಸಲು ಬೆಂಗಳೂರು ಮಹಾನಗರ ಪಾಲಿಗೆ ಮೆಗಾ ಪ್ಲಾನ್ ಸಿದ್ಧಪಡಿಸಿದೆ.
Advertisement
ನಗರದಲ್ಲಿ ಕಳೆದ ಒಂದು ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಸಾವಿರ ಲೆಕ್ಕಾದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಲಭ್ಯವಿರುವ 4 ಲಕ್ಷ ಕಿಟ್ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಲ್ಲಿ 2 ಲಕ್ಷ ಕಿಟ್ ಬೆಂಗಳೂರಿಗೆ ಬಳಸಿಕೊಳ್ಳುವ ಚಿಂತನೆ ಇದೆ. ನಿರಂತರವಾಗಿ ನಗರದ 198 ವಾರ್ಡ್ ಗಳಲ್ಲೂ ಕೊರೊನಾ ಟೆಸ್ಟ್ ನಡೆಯಲಿದೆ.
Advertisement
Advertisement
ಆಗಸ್ಟ್ ಮೊದಲ ದಿನದಿಂದಲೇ ಕಂಟೈನ್ಮೆಂಟ್ ನಿಯಮಗಳು ಬದಲಾಗಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಕಂಟೈನ್ಮೆಂಟ್ ಮತ್ತಷ್ಟು ಬಿಗಿ ಮಾಡುವ ಲೆಕ್ಕಾಚಾರ ಬಿಬಿಎಂಪಿ ಮುಂದಿದೆ. ನಗರದ ಸ್ಲಂ, ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಿಸುವ ಕಂಟೈನ್ಮೆಂಟ್ ಝೋನ್ಗಳಲ್ಲಿ ಬಿಬಿಎಂಪಿಯೇ ಅಗತ್ಯ ವಸ್ತು ಕೊಡುವುದು. ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಸಂಬಳ ಕಡಿತವಾದಂತೆ ನಿಗಾ ವಹಿಸುವುದು ಸೇರಿದಂತೆ ಆಕ್ಸಿ ಮೀಟರ್, ಅಗತ್ಯ ಮಾತ್ರೆ ನೀಡುವ ಚಿಂತನೆ ನಡೆದಿದೆ.
Advertisement
ಮಾಸ್ಕ್ ಹಾಗೂ ಸಾಮಾಜಿಕ ಅಂತರ ವಿಚಾರವಾಗಿ ದಂಡ ಹೆಚ್ಚಿಸಲು ಪಾಲಿಕೆ ಪ್ರಸ್ತಾವನೆ ನೀಡಿದೆ. ಈ ಪ್ರಕಾರ 200 ರೂ. ರಿಂದ 1 ಸಾವಿರ ರೂ. ದಂಡ ಹೆಚ್ಚಳವಾಗುವ ಸಾಧ್ಯತೆ ಇದೆ.
ನಗರದಲ್ಲಿ ಸದ್ಯ 40 ರಿಂದ 45 ರಷ್ಟು ಮಂದಿ ಹೋ ಐಸೋಲೇಷನ್ನಲ್ಲಿದ್ದಾರೆ. ಇಂತಹ ಕೊರೊನಾ ಸೋಂಕಿತರಿಗೆ ಆಕ್ಸಿ ಮೀಟರ್ ನಲ್ಲಿ 95 ರಷ್ಟು ರೇಟಿಂಗ್ ಇದ್ದರೆ ಸಾಂಸ್ಥಿಕ ಕ್ವಾರಂಟೈನ್ ಅಗತ್ಯವಿಲ್ಲ. ರೋಗಗಳಿಗೆ ಅಗತ್ಯವಿರುವ ಔಷಧಿಗಳನ್ನು ಪೂರೈಕೆ ಮಾಡಿದರೆ ಗುಣಮುಖರಾಗುವ ಸಾಧ್ಯತೆ ಇದೆ. ಆದ್ದರಿಂದ ಬಹುತೇಕ ಶೇ.90 ರಷ್ಟು ಮಂದಿಯನ್ನು ಹೋಂ ಐಸೋಲೇಷನಲ್ಲೇ ಉಳಿಯುವಂತೆ ಮಾಡಲು ಚಿಂತನೆ ನಡೆಸಲಾಗಿದೆ.