– ಜೂನ್ 17ಕ್ಕೆ ಸಿಎಂ ಬಿಎಸ್ವೈ ಜೊತೆ ಮೋದಿ ಸಭೆ
ಚಂಡೀಗಢ್: ಪಂಜಾಬ್ ರಾಜ್ಯದಲ್ಲಿ ಕೊರೊನಾ ಕೇಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ವೀಕೆಂಡ್ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಕಠಿಣ ಲಾಕ್ಡೌನ್ ಜಾರಿಯಾಗಿದೆ.
ಪಂಜಾಬ್ ಸರ್ಕಾರದ ಆದೇಶದ ಪ್ರಕಾರ, ವಾರದ ಶನಿವಾರ ಮತ್ತು ಭಾನುವಾರ ಲಾಕ್ಡೌನ್ ಇರಲಿದೆ. ಇದರ ಜೊತೆಗೆ ಸರ್ಕಾರಿ ರಜೆ ದಿನಗಳಲ್ಲೂ ಲಾಕ್ಡೌನ್ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಅಂಗಡಿಗಳು ತೆರೆಯುವುದಿಲ್ಲ ಹಾಗೂ ಸಾರಿಗೆ ಸಂಚಾರವೂ ಇರುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
Advertisement
Advertisement
ಪಂಜಾಬ್ ಸರ್ಕಾರ ಇಂದಿನಿಂದಲೇ ಪ್ರಯೋಗಿಕವಾಗಿ ಲಾಕ್ಡೌನ್ ಅನ್ನು ಜಾರಿ ಮಾಡಿದೆ. ಆದರೆ ಈಗಾಗಲೇ ಲಾಕ್ಡೌನ್ ಸಮಯದಲ್ಲಿ ನಮಗೆ ಬಹಳ ಲಾಸ್ ಆಗಿದೆ. ಈಗ ಮತ್ತೆ ಲಾಕ್ಡೌನ್ ಮಾಡಿದರೆ ನಮಗೆ ಬಹಳ ತೊಂದರೆಯಾಗುತ್ತದೆ ಎಂದು ಅಂಗಡಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದರ ಜೊತೆಗೆ ಸರ್ಕಾರ ದಿಢೀರ್ ಆಗಿ ಲಾಕ್ಡೌನ್ ಘೋಷಣೆ ಮಾಡಿದ್ದು, ಇ-ಪಾಸ್ ಇರುವವರು ಹಾಗೂ ಅಗತ್ಯ ಸೇವೆಗೆ ಹೊರಬರುವವರನ್ನು ಏನೂ ಮಾಡಬೇಕು ಎಂದು ಆಡಳಿತಾಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
Advertisement
Advertisement
ಸದ್ಯ ಪಂಜಾಬ್ನಲ್ಲಿ ಒಟ್ಟು 2,986 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2,282 ಜನರು ಈಗಾಗಲೇ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ಪ್ರಸ್ತುತ ಪಂಜಾಬ್ನಲ್ಲಿ 641 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಕೊರೊನಾ ಸೋಂಕಿನಿಂದ ಪಂಜಾಬ್ನಲ್ಲಿ ಸುಮಾರು 64 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದ್ದು, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳುತ್ತಿದೆ.
ಈಗಾಗಲೇ ಇಡೀ ದೇಶದಲ್ಲಿ ಜೂನ್ 31ರ ವರೆಗೂ ಲಾಕ್ಡೌನ್ ಇದ್ದರೂ ಕೆಲ ಸಡಿಲಿಕೆಗಳು ನೀಡಲಾಗಿದೆ. ಈ ಕಾರಣದಿಂದ ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಜರ್ಖಾಂಡ್ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕಾಗಿ ಮೋದಿ ಮತ್ತೆ ಸಭೆ ನಡೆಸುತ್ತಿದ್ದು, ಮತ್ತೆ ಲಾಕ್ಡೌನ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲೂ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಜೂನ್ 17ರಂದು ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಅವರ ಜೊತೆ ಸಭೆ ನಡೆಸಲಿದ್ದಾರೆ.