ರಾಯಚೂರು: ಕೊರೊನಾ ನಂತರ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಚ್ಎಲ್ಎಚ್ ಹಾಗೂ ಎಂಐಸಿ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಔಷಧಿ ಸೇರಿದಂತೆ ಇತರೆ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯದಲ್ಲಿ ಮಕ್ಕಳ ಔಷಧಿಯಲ್ಲಿ ಏನು ಕೊರತೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ರಾಯಚೂರಿನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ: ನಟ ರವಿಶಂಕರ್ ಗೌಡ
ರಾಯಚೂರು ಜಿಲ್ಲಾ ಪ್ರವಾಸದಲ್ಲಿರುವ ಸಚಿವೆ ಶಶಿಕಲಾ ಜೊಲ್ಲೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ಸಂಭಾವ್ಯ-3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೋಸ್ಟ್ ಕೋವಿಡ್ನಲ್ಲಿ ಮಕ್ಕಳಿಗೆ ಕೆಲವು ತೊಂದರೆ ಶುರುವಾಗಿದೆ. ಮಕ್ಕಳು ಅನಾರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಆರೋಗ್ಯ ಸಚಿವರ ಜೊತೆಗೆ ಚರ್ಚೆ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಸೋಮವಾರದಿಂದ ಲಾಕ್ ಓಪನ್ – ನೈಟ್, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿ ಆದೇಶ
Advertisement
Advertisement
ಕೊರೊನಾ ಮೂರನೇ ಅಲೆ ಹಿನ್ನೆಲೆ ರಾಯಚೂರು ಜಿಲ್ಲೆಯಾದ್ಯಂತ 7 ಮಕ್ಕಳ ಕೊರೊನಾ ಕೇರ್ ಸೆಂಟರ್ ತೆರೆಯಲು ಚಿಂತನೆ ನಡೆದಿದೆ. ಜಿಲ್ಲೆಯಲ್ಲಿ ಮಕ್ಕಳ ಸಲುವಾಗಿ 600 ಬೆಡ್ ಗಳ ವ್ಯವಸ್ಥೆ ಆಗಿದೆ. ರಿಮ್ಸ್ನಲ್ಲಿ 8 ಜನ ಮಕ್ಕಳ ತಜ್ಞರಿದ್ದಾರೆ. ಜಿಲ್ಲೆಯಾದ್ಯಂತ 14 ಮಕ್ಕಳ ತಜ್ಞರಿದ್ದಾರೆ. ಮಕ್ಕಳಿಗೆ ವಾಕ್ಸಿನೇಷನ್ ಆಗದೇ ಇರುವುದರಿಂದ ನಾವು ಮಕ್ಕಳ ಸಲುವಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಇದುವರೆಗೆ ಜಿಲ್ಲೆಯಲ್ಲಿ 2648 ಮಕ್ಕಳಿಗೆ ಕೊರೊನಾ ಸೋಂಕು ಬಂದಿದೆ. ಮಕ್ಕಳಲ್ಲಿ ಹಲವು ರೋಗ ಕಾಣಿಸಿಕೊಳ್ಳುತ್ತಿದೆ. ಡಾ.ದೇವಿಶೆಟ್ಟಿ ನೇತೃತ್ವದ ತಂಡ ಕೊರೊನಾ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿದೆ ಎಂದರು.
Advertisement
Advertisement
ತಂದೆತಾಯಿ ಕಳೆದುಕೊಂಡ ಮಕ್ಕಳ ಜೊತೆಗೆ ವೀಡಿಯೋ ಸಂವಾದ ಮಾಡಿದ್ದೇನೆ. ರಾಜ್ಯದಲ್ಲಿ ಮಧ್ಯಮ ಹಾಗೂ ಬಡವರ ಮಕ್ಕಳೇ ಅನಾಥವಾಗಿದ್ದಾರೆ. ಸದ್ಯ 31 ಮಕ್ಕಳು ಸಂಬಂಧಿಕರ ಪೋಷಣೆಯಲ್ಲಿದ್ದಾರೆ. ಪೋಷಕರಿಗೆ ಮಕ್ಕಳನ್ನು ನೋಡಲು ಆಗಿಲ್ಲವೆಂದರೆ ದತ್ತು ಸ್ವೀಕಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು. ಮಕ್ಕಳ ಎಲ್ಲಾ ಜವಾಬ್ದಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ತೆಗೆದುಕೊಳ್ಳಲಿದೆ ಅಂತ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.