– ಆಸ್ಪತ್ರೆ ಸಿಬ್ಬಂದಿಯಲ್ಲಿ ಮನೆಮಾಡಿದ ಆತಂಕ
ಕೊಪ್ಪಳ: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ಕು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸ್ಟಾಫ್ ನರ್ಸ್ ಮತ್ತು ಚಹಾ ಮಾರುವವ ಸೇರಿದಂತೆ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಗಂಗಾವತಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ಗೆ ಕೊರೊನಾ ಸೋಂಕು ಧೃಡ ಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿಯನ್ನು ಆತಂಕ್ಕೀಡು ಮಾಡಿದೆ. ನರ್ಸ್ಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯನ್ನು ಖಾಲಿ ಮಾಡಿಸಿ ಸ್ವಚ್ಛ ಗೊಳಿಸಲಾಗುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನು ಬೇರೆಡೆ ಸಾಗಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡಲಾಗಿದೆ.
Advertisement
Advertisement
ಗಂಗಾವತಿ ತಾಲೂಕಿನ ಶ್ರೀರಾಮ ನಗರದಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಗ್ರಾಮಸ್ಥರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಗ್ರಾಮದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಕಳೆದ ವಾರವಷ್ಟೇ ಉಡುಪಿಗೆ ಹೋಗಿ ಬಂದಿದ್ದ. ರೋಗ ಲಕ್ಷಣ ಕಾಣುತ್ತಿದಂತೆ ಚಿಕಿತ್ಸೆಗೆ ಆಗಮಿಸಿದಾಗ ಕೊರೊನಾ ದೃಢ ಪಟ್ಟಿದೆ. ಈತನ ಸಂಪರ್ಕಿತರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಹರಸಾಹಸ ಪಡುವಂತಾಗಿದೆ. ಈಗಾಗಲೇ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
Advertisement
ಗಂಗಾವತಿ ನಗರದಲ್ಲಿ ಸೋಮವಾರ ನಾಲ್ಕು ವರ್ಷದ ಬಾಲಕನಿಗೆ ಕೊರೊನಾ ಆವರಿಸಿತ್ತು. ಇಂದು ಮಗುವಿನ ತಂದೆಗೂ ಸೋಂಕು ದೃಢ ಪಟ್ಟಿದೆ. ಮಹಾರಾಷ್ಟ್ರದಿಂದ ಆಗಮಿದ ಕುಟುಂಬ ಚಿಕಿತ್ಸೆ ಕೊಡಿಸಲು ಬಂದಾಗ ಮಗುವಿನಲ್ಲಿ ಸೋಂಕಿರುವುದು ಕಾಣಿಸಿಕೊಂಡಿತ್ತು. ಇಂದು ತಂದೆಗೂ ಕೂಡ ಕೊರೊನಾ ತಗುಲಿದೆ.
Advertisement
ಕಾರಟಗಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ದೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಇಂದು ನಾಲ್ವರಿಗೆ ಸೊಂಕು ಆವರಿಸಿದ್ದು, ಜಿಲ್ಲೆಯ ಜನತೆಯನ್ನು ಭಯ ಭೀತರನ್ನಾಗಿಸಿದೆ.