ಕೊಪ್ಪಳ: ಸ್ಥಳೀಯ ಕರಕುಶಲ ವಸ್ತಗಳಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶದಿಂದ ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿ ಕ್ರಾಫ್ಟ್ ಟೂರಿಸಂ ನಿರ್ಮಿಸಲು ಕೇಂದ್ರ ಸರ್ಕಾರ ಸದ್ಯ ಮುಂದಾಗಿದೆ. ವಿಶ್ವ ಪರಂಪರೆ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಹಂಪಿ ಪಕ್ಕದಲ್ಲಿನ ಆನೆಗೊಂದಿ ಗ್ರಾಮಕ್ಕೆ ಪ್ರತಿ ವರ್ಷ ಸಾವಿರಾರು ಜನರು ಭೇಟಿ ನೀಡಿ, ಸ್ಥಳೀಯ ವಾಗಿರುವ ಪುರಾತನ ದೇವಸ್ಥಾನ, ಮಂಟಪಗಳಿಗೆ ಭೇಟಿ ನೀಡಿ ಇತಿಹಾಸ ತಿಳಿದುಕೊಳ್ಳುತ್ತಾರೆ. ಪ್ರವಾಸಿಗರಿಗೆ ಮಾಹಿತಿ ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಾಫ್ಟ್ ಟೂರಿಸಂ ವಿಲೇಜ್ ಆರಂಭ ಮಾಡಲಾಗಗುತ್ತಿದೆ.
Advertisement
ಏನಿದು ಕ್ರಾಫ್ಟ್ ಟೂರಿಸಂ ವಿಲೇಜ್?
ಆನೆಗೊಂದಿ ಗ್ರಾಮದ ಕೆಲ ಕುಟುಂಬಗಳಿಗೆ ಕರಕುಶಲ ತರಬೇತಿ ನೀಡಿ ದೈನದಿಂದನ ಅಲಂಕಾರಿಕ ವಸ್ತುಗಳ ತಯಾರಿಕೆ ಮಾಡಲಾಗುವುದು. ಈಗಾಗಲೇ ಆನೆಗೊಂದಿಯಲ್ಲಿ ಬಾಳೆದಿಂಡು ಬಳಸಿ ಬ್ಯಾಗ್, ಅಲಂಕಾರಿಕ ಬುಟ್ಟಿಗಳನ್ನ ತಯಾರು ಮಾಡಲಾಗತ್ತೆ. ಇದೇ ಬಾಳೆದಿಂಡು ಇಟ್ಟುಕೊಂಡು ಮತ್ತೊಂದಿಷ್ಟು ಜನರಿಗೆ ಉದ್ಯೋಗ ಕಲ್ಪಿಸೋ ಯೋಜನೆಯಾಗಿದೆ. ಮಹಿಳೆಯರನ್ನ ಸಧೃಡಗೊಳಿಸಲು ಹಾಗೂ ಆರ್ಥಿಕವಾಗಿ ಸಬಲರನ್ನ ಮಾಡಲು ಕೇಂದ್ರ ಸರ್ಕಾರ ಸಹಯೋಗದೊಂದಿಗೆ ಯೋಜನೆ ರೂಪಿಸಲಾಗಿದೆ.
Advertisement
Advertisement
ಆನೆಗೊಂದಿಯಲ್ಲಿ ತಯಾರಾಗುವ ಬಾಳೆ ದಿಂಡಿನ ಬ್ಯಾಗ್, ಬುಟ್ಟಿ, ಚಾಪೆ ದೇಶ ವಿದೇಶಗಳಲ್ಲಿ ಮಾರಾಟವಾಗತ್ತೆ. ಆನ್ಲೈನ್ ನಲ್ಲೂ ಕೂಡಾ ಮಾರಾಟ ಮಾಡಲಾಗತ್ತಿದೆ. ಆನೆಗೊಂದಿಗೆ ಪ್ರತಿ ವರ್ಷ ಸಾವಿರಾರು ವಿದೇಶಿಗರು ಬರ್ತಾರೆ, ಹೀಗಾಗಿ ಕ್ರಾಫ್ಟ್ ಟೂರಿಸಂ ವಿಲೇಜ್, ಮನೆಗಳ ಸೌಂದರ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸುಮಾರು ಐದು ಕೋಟಿ ವೆಚ್ಚದಲ್ಲಿ ಕ್ರಾಫ್ಟ್ ಟೂರಿಸಂ ವಿಲೇಜ್ ಮನೆಗಳ ಸೌಂದರ್ಯಕ್ಕೆ ಒತ್ತು ನೀಡಲಾಗಿದೆ.
Advertisement
150ಕ್ಕೂ ಹೆಚ್ಚು ಮನೆಗಳ ಆಯ್ಕೆ;
ಆನೆಗೊಂದಿಯಲ್ಲಿ 150 ಕ್ಕೂ ಹೆಚ್ಚು ಮನೆಗಳ ಆಯ್ಕೆ ಮಾಡಲಾಗಿದೆ. ಮನೆಗಳನ್ನ ಗುರುತಿಸಿ ಸುಮಾರು ಒಂದು ಲಕ್ಷ ಖರ್ಚು ಮಾಡಿ ಹಳ್ಳಿಗಳ ಮನೆಗಳಂತೆ ಅವುಗಳನ್ನ ಅಲಂಕಾರ ಮಾಡಲು ಮುಂದಾಗಿದೆ. ಆನೆಗೊಂದಿಗೆ ಬಂದ ಪ್ರವಾಸಿಗರು ಯಾವುದೇ ಕಲಾಲೋಕಕ್ಕೆ ಬಂದಿದ್ದೇವೆ ಅನ್ನೋ ಭಾವನೆ ಬರಲಿ ಅನ್ನೋ ಉದ್ದೇಶದಿಂದ ಮನೆಗಳಿಗೆ ಅಲಂಕಾರ ಮಾಡಲು ಮುಂದಾಗಿದೆ. ಜೊತೆಗೆ ಒಂದು ಓಣಿಯ ಪ್ರಮುಖ ದ್ವಾರವನ್ನು ನಿರ್ಮಿಸಿ ಕಲಾ ಲೋಕ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿದೆ.
ಕರಕುಶಲ ವಸ್ತು ತಯಾರಿಕೆ ಹಾಗೂ ಮಾರಾಟ ಸ್ಥಳವನ್ನು ಅಲಂಕಾರ ಮಾಡಲಾಗತ್ತೆ. ವಿಜಯನಗರ ಸಾಮ್ರಾಜ್ಯದ ಗತ ವೈಭವ ನೆನಪು ಮಾಡುವ ರೀತಿಯಲ್ಲಿ ಆನೆಗೊಂದಿಯನ್ನ ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆನೆಗೊಂದಿಯಲ್ಲಿ ಕೆಲ ಮನೆಗಳಿಗೆ ಬಣ್ಣ ಕೂಡಾ ಮಾಡಲಾಗಿದೆ. ವಿದೇಶಿಗರಿಗೆ ಆಕರ್ಷಕವಾಗಿ ಕಾಣಲಿ ಅನ್ನೋ ಉದ್ದೇಶಕ್ಕೆ ಕರಕುಶಲ ವಸ್ತುಗಳ ತಯಾರಿಕೆ ಘಟಕವನ್ನು ಅಲಂಕಾರ ಮಾಡಲಾಗತ್ತೆ. ಬಂದ ಪ್ರವಾಸಿಗರು ಆನೆಗೊಂದಿಗೆ ಬಂದ್ರೆ ಕರಕುಶಲ ಕೇಂದ್ರಕ್ಕ ಭೇಟಿ ನೀಡಬೇಕು ಅನ್ನೋ ರೀತಿಯಲ್ಲಿ ಕ್ರಾಫ್ಟ್ ಟೂರಿಸಂ ವಿಲೇಜ್ ನಿರ್ಮಾಣ ಮಾಡಲಾಗವುದು.