ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗಿದ್ದು, ಬೇಸಿಗೆಯಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
Advertisement
ಬೆಳಗ್ಗೆಯಿಂದಲೂ ಜಿಲ್ಲೆಯ ಸುತ್ತಮುತ್ತ ಮೋಡ ಕವಿದ ವಾತಾವರಣ ಇತ್ತು. ಸಂಜೆಯಾಗುತ್ತಲೇ ನಾಪೋಕ್ಲು, ವಿರಾಜಪೇಟೆ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಉತ್ತಮ ಮಳೆ ಸುರಿದಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದು, ಜನತೆ ಸಂತಸಗೊಂಡಿದ್ದಾರೆ.
Advertisement
Advertisement
ಮಡಿಕೇರಿ, ತಲಕಾವೇರಿ, ಭಾಗಮಂಡಲ, ಗೋಣಿಕೊಪ್ಪಲು, ನಾಪೋಕ್ಲು, ಬೆಟ್ಟಗೇರಿ, ಚೆಟ್ಟಿಮಾನಿ, ಅಪ್ಪಂಗಳ, ಕಾಟಕೇರಿ ಮತ್ತು ಮದೆನಾಡು ವ್ಯಾಪ್ತಿಯಲ್ಲೂ ಮೋಡ ಕವಿದ ವಾತಾವರಣ ಇದೆ. ಸಂಜೆ ಹೊತ್ತಿಗೆ ಈ ಭಾಗದಲ್ಲಿ ಸಹ ಮಳೆಯಾಗುವ ಸಂಭವವಿದೆ.