ಮಡಿಕೇರಿ: ಆಗಸ್ಟ್ ತಿಂಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದಿಂದ ಆಗಿರುವ ನಷ್ಟ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಕೇಂದ್ರ ಗೃಹ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಇಂದು ಕೊಡಗಿಗೆ ಭೇಟಿ ನೀಡಿದೆ.
Advertisement
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಸೈನಿಕ ಶಾಲೆಗೆ ಆಗಮಿಸಿರುವ ತಂಡ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ವಿವಿಧ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದೆ. ಅಲ್ಲದೆ ಭೂಕುಸಿತ ಮತ್ತು ಪ್ರವಾಹದ ಸಾಕ್ಷ್ಯ ಚಿತ್ರಗಳನ್ನು ವೀಕ್ಷಿಸಿದೆ.
Advertisement
Advertisement
ಮಾಹಿತಿ ಪಡೆದುಕೊಂಡ ಕೇಂದ್ರ ತಂಡವು ನಂತರ ಪ್ರಮುಖವಾಗಿವ ಭೂಕುಸಿತವಾಗಿರುವ ಮಡಿಕೇರಿ ಸಮೀಪದ ಬೊಟ್ಲಪ್ಪ ಪೈಸಾರಿ, ಬಾಗಮಂಡಲ ಸಮೀಪದ ಚೇರಂಗಾಲ ಮತ್ತು ತಲಕಾವೇರಿ ಸಮೀಪ ಬ್ರಹ್ಮಗಿರಿ ಸಾಲಿನ (ಗಜಗಿರಿ ಬೆಟ್ಟ) ಪ್ರದೇಶಗಳಿಗೆ ಭೇಟಿ ನೀಡಲಿದೆ. ಈ ಸಂದರ್ಭ ಪ್ರವಾಹ ಮತ್ತು ಭೂಕುಸಿತದಿಂದ ಆಗಿರುವ ನಷ್ಟದ ಬಗ್ಗೆ ಸ್ಥಳೀಯರಿಂದಲೂ ಮಾಹಿತಿ ಸಂಗ್ರಹಿಸಲಿದೆ.