ಮಡಿಕೇರಿ: ಕೊಡಗನ್ನು 300 ವರ್ಷಗಳ ಕಾಲ ಆಳ್ವಿಕೆ ಮಾಡಿದ ಹಾಲೇರಿ ರಾಜವಂಶಸ್ಥರಿಗೆ ಅಪಮಾನ ಮಾಡಲಾಗಿದೆ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಎಲ್ಲಿಂದಲೋ ಬೂದಿ ಬಳಿದುಕೊಂಡು ಬಂದವರಿಗೆ ಪಟ್ಟಕಟ್ಟಿ ಈಗ ಕೊಡಗಿನ ಜನರು ಪಡಬಾರದ ಕಷ್ಟ ಪಡುತ್ತಿದ್ದೇವೆ ಎಂದು ಪವನ್ ಪೆಮ್ಮಯ್ಯ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
ಸಂಸದ ಪ್ರತಾಪ್ ಸಿಂಹ ಅವರು ಕೊಡಗು ಪ್ರವಾಸೋದ್ಯಮದ ಮೇಲೆ ನಿಂತಿದೆ ಎಂದು ಹೇಳಿದ್ದರು. ಇದನ್ನು ಟೀಕಿಸಿಸುವ ಭರದಲ್ಲಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಪವನ್ ಪೆಮ್ಮಯ್ಯ, ಕೊಡಗಿನ ರಾಜವಂಶವನ್ನು ಹೀಯಾಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವೀರಶೈವ ಮಹಾಸಭಾ, ವೀರಶೈವ ಯುವ ವೇದಿಕೆ ಮತ್ತು ಅಖಿಲ ಭಾರತ ವೀರಶೈವ ಆರ್ಯ ಸಮಾಜ ಸೇರಿದಂತೆ ಹಲವು ಸಂಘಟನೆಗಳಿಂದ ದೂರು ನೀಡಲಾಗಿದೆ.
Advertisement
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ, ಸೋಮವಾರಪೇಟೆ ಮತ್ತು ಕೊಡ್ಲಿಪೇಟೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಆದರೆ ಪವನ್ ಪೆಮ್ಮಯ್ಯ ಯಾವ ಸುಮುದಾಯದವರಿಗೂ ನೋವು ಉಂಟು ಮಾಡುವ ಉದ್ದೇಶ ಇರಲಿಲ್ಲ. ಪೋಸ್ಟ್ ನಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಯೋಚಿಸುತ್ತೇನೆ ಎಂದು ಕ್ಷಮೆಯಾಚಿಸಿದ್ದಾರೆ.