ತಿರುವನಂತಪುರ: ಕೇರಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಇದೀಗ ಕೊರೊನಾ ಮೂರನೇ ಅಲೆಗೆ ಮುನ್ನುಡಿ ಬರೆಯುತ್ತಾ ಎಂಬ ಅನುಮಾನವೊಂದು ಎದ್ದು ಕಾಣುತ್ತಿದೆ.
ಕೇರಳದಲ್ಲಿ ವ್ಯಾಕ್ಸಿನ್ ಪಡೆದವರನ್ನೂ ಕೊರೊನಾ ಕಾಡುತ್ತಿದೆ. 2 ನೇ ಡೋಸ್ ಪಡೆದ ಸಾವಿರಾರು ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಸುದ್ದಿ ದೇಶದ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಲಸಿಕೆ ಪಡೆದ 40 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
Advertisement
Advertisement
ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಲಸಿಕೆ ಪಡೆದವರಲ್ಲೂ ಸೋಂಕು ಸ್ಫೋಟಗೊಂಡಿದೆ. ಪತ್ತನಂತಿಟ್ಟು ಎಂಬಲ್ಲಿ ಸುಮಾರು 1.35 ಲಕ್ಷ ಕೊವೀಡ್ ಪ್ರಕ್ರರಣಗಳು ಪತ್ತೆಯಾಗಿವೆ. ಮೊದಲ ಡೋಸ್ ಪಡೆದ 14,974 ಮಂದಿಯಲ್ಲಿ ಸೋಂಕು ಪತ್ತೆಯಾದರೆ, 2ನೇ ಡೋಸ್ ಪಡೆದ ಬಳಿಕ 5042 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಕಂಟ್ರೋಲ್ಗೆ ಬಾರದ ಕೊರೊನಾ- ನಾಲ್ಕು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ರಾಜ್ಯದಲ್ಲೇ ಹೆಚ್ಚು ಕೇಸ್
Advertisement
ಕೇರಳದಲ್ಲಿ ಸೋಂಕು ಈ ಪ್ರಮಾಣದಲ್ಲಿ ಏರಿಕೆಯಾಗಲು ಪ್ರಮುಖ ಕಾರಣ ಕಂಟೈನ್ಮೆಂಟ್ ಝೋನ್ ಮಾಡುವುದರಲ್ಲಿ ಕಟ್ಟುನಿಟ್ಟಿನ ಕ್ರಮ ಅಳವಡಿಸಿಕೊಳ್ಳದೇ ಇರುವುದಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿರ್ದೇಶನದಂತೆ ಅದನ್ನು ಪಾಲಿಸಿಲ್ಲ. ಅಲ್ಲದೆ ಪರೀಕ್ಷೆಯ ಪ್ರಮಾಣವೂ ಕಡಿಮೆ ಇದೆ ಎಂದು ಕೇಂದ್ರದಿಂದ ಭೇಟಿ ನೀಡಿದ ಆರು ಮಂದಿ ತಜ್ಞರನ್ನು ಒಳಗೊಂಡ ತಂಡ ಅಭಿಪ್ರಾಯಪಟ್ಟಿದೆ.
Advertisement
ಒಟ್ಟಿನಲ್ಲಿ 6 ಜನರ ತಂಡದ ಅಧ್ಯಯನದಲ್ಲಿ ಡೆಲ್ಟಾ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಕೇರಳದಲ್ಲಿ 40 ಸಾವಿರ ಹೊಸ ರೀತಿಯ ಪ್ರಕರಣಗಳು ಪತ್ತೆಯಾಗಿದ್ದು, ಕೇರಳ ಕೊರೋನಾದಿಂದ ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಆತಂಕ ವ್ಯಕ್ತವಾಗಿದೆ.