ಮಂಗಳೂರು: ಕೊರೊನಾ ಇನ್ನೇನು ಹತೋಟಿಗೆ ಬಂತು ಎಂದು ನಿಟ್ಟುಸಿರು ಬಿಡುತ್ತಿದ್ದ ಕರಾವಳಿಯ ಜನತೆಗೆ ಮತ್ತೆ ಭೀತಿ ಎದುರಾಗಿದೆ. ಕಳೆದ ನಾಲ್ಕು ದಿನದಿಂದ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದೆ.
ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೊನಾ ಮಹಾಮಾರಿಯ ಬಗ್ಗೆ ಕೇಳಿ ಹೆದರುತ್ತಿದ್ದ ಜನ ಬಳಿಕ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿಯಾಯಿತು. ಇದೀಗ ಕೆಲ ತಿಂಗಳಿನಿಂದ ಹತೋಟಿಗೆ ಬಂದಿದೆ ಎಂದು ನಿರಾಳರಾಗಿದ್ದರು. ಇದೀಗ ಎರಡನೇ ಅಲೆ ಎಂಬಂತೆ ಮತ್ತೆ ಕಾಣಿಸಿಕೊಂಡಿರುವ ಮಹಾಮಾರಿ, ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ತಿಂಗಳಿನಿಂದ 20 ಪಾಸಿಟಿವ್ ದಾಟುತ್ತಿರಲಿಲ್ಲ. ಇದೀಗ ನಾಲ್ಕು ದಿನದಿಂದ ಪ್ರತಿದಿನ 50 ಪಾಸಿಟಿವ್ ದಾಟುತ್ತಿದ್ದು ನಿನ್ನೆ 72 ಮಂದಿಗೆ ಸೋಮಕು ಪತ್ತೆಯಾಗಿದೆ. ಕೇರಳದಿಂದ ಬಂದ ವಿದ್ಯಾರ್ಥಿಗಳಿಂದಲೇ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದ್ದು, ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ.
Advertisement
Advertisement
ಮೆಡಿಕಲ್, ಡೆಂಟಲ್, ನರ್ಸಿಂಗ್ ಶಿಕ್ಷಣಕ್ಕಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು ಪತ್ತೆಯಾಗುತ್ತಿವೆ. ಯೆನೆಪೋಯಾ ವಿವಿಯ ಶಿಕ್ಷಣ ಸಂಸ್ಥೆಗಳಲ್ಲಿಯೂ ಕೋವಿಡ್ ಪ್ರಕರಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಯೆನೆಪೋಯಾ ವಿವಿಗೆ ಸೇರಿದ 9 ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಂಸ್ಥೆಯಲ್ಲಿ 30ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಸೂಚನೆಯಂತೆ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಇದರ ಜೊತೆ ಶ್ರೀ ದೇವಿ ನರ್ಸಿಂಗ್ ಕಾಲೇಜುನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
Advertisement
Advertisement
ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲೇ ಪಾಸಿಟಿವ್ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿದ್ದು, ಇದನ್ನು ತಡೆಗಟ್ಟುವ ಕೆಲಸ ಆಗುತ್ತಿಲ್ಲ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಕೇರಳದಿಂದ ಮಂಗಳೂರಿಗೆ ಜನ ಬಂದು ಹೋಗುತ್ತಿದ್ದರೂ, ಯಾರಿಗೂ ಯಾವುದೇ ಟೆಸ್ಟ್, ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ.