-ಕೊಡಗಿಗೆ ಕೇರಳದಿಂದ ಬರುವವರೇ ಕಂಟಕವಾಗುತ್ತಾರಾ?
-ಕೊಡಗಿನಲ್ಲಿ ಮತ್ತೆ ಹೆಚ್ಚಾಗ್ತಿದ್ಯಾ ಕೊರೊನಾ?
ಮಡಿಕೇರಿ: ಗಡಿ ಜಿಲ್ಲೆ ಕೊಡಗಿಗೆ ಹೊಂದಿಕೊಂಡಂತಿರುವ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕೊಡಗಿನ ಜನರಲ್ಲಿ ಆತಂಕ ಹುಟ್ಟಿಸಿದೆ.
Advertisement
ಕೇರಳ ಮತ್ತು ಕೊಡಗಿಗೆ ಸಂಪರ್ಕ ಕಲ್ಪಿಸುವ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್ಗಳಲ್ಲಿ ಕೇಂದ್ರದ ಕೊರೊನಾ ಹೊಸ ನಿಯಮದ ಪ್ರಕಾರ ಯಾವುದೇ ತಪಾಸಣೆಗಳು ನಡೆಯುತ್ತಿಲ್ಲ. ಜೊತೆಗೆ ಕೇರಳ ಕೊಡಗಿಗೆ ಹೋಗಿ ಬರಲು ಯಾವುದೇ ನಿರ್ಬಂಧಗಳಿಲ್ಲ. ಹೀಗಾಗಿ ನೂರಾರು ವಾಹನಗಳ ಮೂಲಕ ನಿತ್ಯ ಸಾವಿರಾರು ಜನರು ಕೊಡಗಿನಿಂದ ಕೇರಳಕ್ಕೆ, ಕೇರಳದಿಂದ ಕೊಡಗಿಗೆ ಓಡಾಡುತ್ತಿದ್ದಾರೆ. ಇದರಿಂದ ಕೊಡಗಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಉಲ್ಬಣಗೊಂಡು ಬಿಡುತ್ತಾ ಎನ್ನುವ ಆತಂಕ ಎದುರಾಗಿದೆ.
Advertisement
Advertisement
ಕಳೆದ ಮೂರು ದಿನಗಳ ಹಿಂದೆಯಷ್ಟೇ ಕೊಡಗಿನಲ್ಲಿ ಕೋವಿಡ್ ಪ್ರಕರಣಗಳು ಶೂನ್ಯಕ್ಕೆ ಇಳಿದಿತ್ತು. ಆದರೆ ಅದರ ಮಾರನೇ ದಿನವೇ ಮೂರರಿಂದ ನಾಲ್ಕು ಹೊಸ ಪ್ರಕರಣಗಳು ದಾಖಲಾಗಿವೆ. ಕೊಡಗಿನಿಂದ ಕರಿಕೆ, ಕುಟ್ಟ ಮತ್ತು ಮಾಕುಟ್ಟ ಈ ಮೂರು ಕಡೆಗಳಲ್ಲಿ ಇರುವ ಚೆಕ್ಪೋಸ್ಟ್ಗಳಲ್ಲಿ ಯಾವುದೇ ತಪಾಸಣೆ ನಡೆಯುತ್ತಿಲ್ಲ. ಬದಲಾಗಿ ಫೆಬ್ರವರಿ 2 ರ ನಂತರ ಕೇರಳದಿಂದ ಕೊಡಗಿಗೆ ಬಂದಿರುವವರು ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಕೊಡಗು ಜಿಲ್ಲಾಡಳಿತ ಸೂಚನೆ ನೀಡಿದೆ.
Advertisement
ಕೇರಳ -ಕೊಡಗು ಗಡಿ ಭಾಗ ಆಗಿರುವುದರಿಂದ ದಿನ ನಿತ್ಯ ಕೇರಳದ ಕಣ್ಣೂರಿಗೆ ಕೆಎಸ್ಆರ್ಟಿಸಿ ಬಸ್ಸುಗಳು ಸಂಚಾರ ಮಾಡುತ್ತಿವೆ. ಇದರಲ್ಲಿ ಹೆಚ್ಚಾಗಿ ಕೇರಳದಿಂದ ಕೊಡಗಿಗೆ ಕನಿಷ್ಠ 25 ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಇದರಿಂದಾಗಿ ಚಾಲಕ ಹಾಗೂ ನಿರ್ವಾಹಕರಿಗೆ ಕೊರೊನಾದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಮುಂಜಾಗ್ರತ ಕ್ರಮವಾಗಿ ಕೇರಳದಿಂದ ಬಂದ ಬಸ್ಸಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಆದರೂ ದಿನ ನಿತ್ಯ ಭಯದಿಂದಲೇ ಹೋಗಿ ಬರುವ ಅನಿವಾರ್ಯತೆ ಇದೆ ಎಂದು ಕೆಎಸ್ಆರ್ಟಿಸಿ ಬಸ್ಸು ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಡಗಿನಲ್ಲಿ ಕಳೆದ ಒಂದು ವಾದದಿಂದ ಒಂದು ಪ್ರಕರಣವು ಇಲ್ಲದೆ 0% ನಲ್ಲಿತ್ತು. ಆದರೆ ಕಳೆದ ನಾಲ್ಕು ಐದು ದಿನಗಳಿಂದ ಮೂರರಿಂದ ನಾಲ್ಕು ಪಾಸಿಟಿವ್ ಪ್ರಕರಣ ಮತ್ತೆ ದಾಖಲು ಆಗುತ್ತಿದೆ. ಅಲ್ಲದೆ ಹೊಸ ಎಸ್ಓಪಿ ಪ್ರಕಾರ ಅಂತರ ರಾಜ್ಯ ಚೆಕ್ ಪೋಸ್ಟ್ನಲ್ಲಿ ಯಾವುದೇ ತಪಾಸಣೆ ಇಲ್ಲ. ಹೀಗಾಗಿ ಕೇರಳದಿಂದ ಕೊಡಗಿಗೆ ಆಗಮಿಸುವವರು ಮುಕ್ತವಾಗಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಕೊಡಗಿಗೆ ಮತ್ತೆ ಕಂಟಕವಾಗುತ್ತಾ ಎಂದು ಜನರಲ್ಲಿ ಆತಂಕ ಶುರುವಾಗಿದೆ.