ತಿರುವನಂತಪುರಂ: ಮೆಟ್ರೋ ಮ್ಯಾನ್ ಎಂದೇ ಖ್ಯಾತರಾಗಿರುವ ಇ ಶ್ರೀಧರನ್ ಅವರನ್ನು ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಬಗ್ಗೆ ಕೇಂದ್ರ ಸಚಿವ ವಿ.ಮುರಳೀಧರನ್ ಟ್ವೀಟ್ ಮೂಲಕ ತಿಳಿಸಿದ್ದರು. ಆದರೆ ಇದೀಗ ಅವರ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೇರಳ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಗರಿಗೆದರಿದ್ದು, ಮುಂದಿನ ತಿಂಗಳು ಚುನಾವಣೆ ನಡೆಯುತ್ತಿದೆ. ಮೆಟ್ರೋ ಮ್ಯಾನ್ ಇ ಶ್ರೀಧರನ್ನು ಅವರು ಕೇರಳದ ಮುಖ್ಯಮಂತ್ರಿ ಅಭ್ಯರ್ಥಿ ಮಾಡಿರುವ ಕುರಿತು ಕೇಂದ್ರ ಸಚಿವ ವಿ.ಮುರಳೀಧರನ್ ಟ್ವೀಟ್ ಮಾಡಿದ್ದರು. ಆದರೆ ಈ ಬಗ್ಗೆ ಮುರಳೀಧರನ್ ಮತ್ತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪಕ್ಷದ ಮುಖ್ಯಸ್ಥರು ಯಾವುದೇ ಘೋಷಣೆ ಮಾಡಿಲ್ಲ. ಮಾಧ್ಯಮಗಳ ವರದಿಯನ್ನು ಆಧರಿಸಿ ನಾನು ಈ ರೀತಿ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಕೇರಳ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಇ ಶ್ರೀಧರನ್ ಅವರನ್ನು ಘೋಷಿಸಲಾಗಿದ್ದು, ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಸಿಪಿಎಂ ಹಾಗೂ ಕಾಂಗ್ರೆಸ್ನ್ನು ಸೋಲಿಸುತ್ತೇವೆ. ಭ್ರಷ್ಠಾಚಾರ ರಹಿತ ಆಡಳಿತ ನಡೆಸುವ ಮೂಲಕ ಅಭಿವೃದ್ಧಿಪರ ಸರ್ಕಾರವನ್ನು ನೀಡುತ್ತೇವೆ ಎಂದು ಮುರಳಿಧರನ್ ತಿಳಿಸಿದ್ದರು. ಇ ಶ್ರೀಧರನ್ ಅವರು ಫೆ.21 ರಂದು ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
Advertisement
.@BJP4Keralam will fight #Keralapolls with E Sreedharan Ji as its Chief Ministerial Candidate.
We will defeat both @CPIMKerala & @INCKerala to provide a corruption-free, development-oriented Governance for the people of Kerala.
#VijayaYatra @JoshiPralhad @surendranbjp pic.twitter.com/lIlMgiXfS9
— V Muraleedharan (@VMBJP) March 4, 2021
Advertisement
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೇರಳ ಜನತೆಯ ಅಗತ್ಯತೆಗಳ ಬಗ್ಗೆ ಕಾಳಜಿ ವಹಿಸಲಾಗುವುದು. ಎ ಶ್ರೀಧರನ್ ಅವರ ನೇತೃತ್ವದಲ್ಲಿ ಹೊಸ ಕೇರಳ ತಲೆ ಎತ್ತಲಿದೆ. ರಾಜ್ಯದಲ್ಲಿ ದಕ್ಷ ಹಾಗೂ ಪರಿಣಾಮಕಾರಿ ಆಡಳಿತವನ್ನು ನೀಡುತ್ತೇವೆ ಎಂದು ಅವರು ತಿಳಿಸಿದ್ದರು.
ಯಾವುದೇ ಅನೌನ್ಸ್ ಮೆಂಟ್ ಆಗಿಲ್ಲ
ಮಾಧ್ಯಮ ವರದಿಗಳನ್ನು ಆಧರಿಸಿ ಪಕ್ಷವೇ ಶ್ರೀಧರನ್ ಅವರನ್ನು ಕೇರಳ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದೆ ಎಂದು ಟ್ವೀಟ್ ಮಾಡಿದ್ದೆ. ನಂತರ ನಾನು ಈ ಬಗ್ಗೆ ಗ್ರಾಸ್ ಚೆಕ್ ಮಾಡಿದ್ದು, ಪಕ್ಷದ ಮುಖ್ಯಮಸ್ಥರ ಬಳಿ ಮಾತನಾಡಿದೆ. ಅವರು ಈ ಬಗ್ಗೆ ಯಾವುದೇ ರೀತಿಯ ಘೋಷಣೆ ಮಾಡಿಲ್ಲ ಎಂದು ಹೇಳಿದರು ಎಂದು ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.
What I wanted to tell was that through media reports I learnt that the party has made this announcement. Later, I cross-checked with the party chief who said that he has not made any such announcement: V Muraleedharan on his statement on E Sreedharan pic.twitter.com/anMBbkiPlw
— ANI (@ANI) March 4, 2021
ಪಕ್ಷದ ನಿಯಮವನ್ನೂ ಮೀರಿ ಬಿಜೆಪಿ ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂಬ ಚರ್ಚೆ ನಡೆಯುತ್ತಿದ್ದವು. ಬಿಜೆಪಿ ನಿಯಮಗಳ ಪ್ರಕಾರ 75 ವರ್ಷ ಮೇಲ್ಪಟ್ಟವರು ನಿವೃತ್ತರಾಗಬೇಕು. ಆದರೆ ಶ್ರೀಧರನ್ ಅವರಿಗೆ ಜೂನ್ ತಿಂಗಳಿಗೆ 89 ವರ್ಷಗಳಾಗುತ್ತವೆ. ಇವರನ್ನು ಹೊರತುಪಡಿಸಿದರೆ ರಾಜ್ಯದ ಬಿ.ಎಸ್.ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ 76 ವರ್ಷಗಳಾಗಿದ್ದವು.
ಯಾರು ಇ ಶ್ರೀಧರನ್?
ಭಾರತೀಯ ಎಂಜಿನಿಯರಿಂಗ್ ಸೇವೆ (ಐಇಎಸ್) ಸಲ್ಲಿಸಿ ಈಗ ನಿವೃತ್ತರಾಗಿರುವ ಇವರು 1995 ರಿಂದ 2012ರ ವರೆಗೂ ದೆಹಲಿ ಮೆಟ್ರೋ ಮುಖ್ಯಸ್ಥರಾಗಿದ್ದರು. ಶ್ರೀಧರನ್ ದೇಶಾದ್ಯಂತ ಸ್ವದೇಶಿ ಮೆಟ್ರೋ ರೈಲು ವ್ಯವಸ್ಥೆ ಜಾರಿಗೆ ಮೋದಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿದ್ದಾರೆ.
ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. 2003 ರಲ್ಲಿ ಟೈಮ್ಸ್ ನಿಯತಕಾಲಿಕೆಯು ಏಷ್ಯಾದ ಸೆಲೆಬ್ರಿಟಿ ಹೀರೋಗಳಲ್ಲಿ ಒಬ್ಬರೆಂದು ಅವರನ್ನು ಹೆಸರಿಸಿತ್ತು. ವಿಶ್ವಸಂಸ್ಥೆಯ ಸುಸ್ಥಿರ ಸಾರಿಗೆ ಕುರಿತು ಉನ್ನತ ಮಟ್ಟದ ಸಲಹಾ ಸಮೂಹದಲ್ಲಿ ಸೇವೆ ಸಲ್ಲಿಸಲು ಶ್ರೀಧರನ್ ಅವರನ್ನು ನೇಮಕ ಮಾಡಲಾಗಿತ್ತು.
ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ ಸಿಎಂ ಕೇಜ್ರಿವಾಲ್ ಅನುವು ಮಾಡಿಕೊಡಲು ಮುಂದಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಇದಕ್ಕೆ ಅವಕಾಶ ನೀಡಬಾರದು ಎಂದು ಶ್ರೀಧರನ್ ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಒಂದೊಮ್ಮೆ ಮೆಟ್ರೋ ಪ್ರಯಾಣದಲ್ಲಿ ಉಚಿತ ಸಂಚಾರ ಆರಂಭಿಸಿದರೆ ಸಂಸ್ಥೆಗಳು ದಿವಾಳಿ ಆಗಲಿದೆ. ಯಾವುದೇ ಕಾರಣಕ್ಕೂ ಇವುಗಳಿಗೆ ಪ್ರೋತ್ಸಾಹ ನೀಡಬಾರದು. ಮೆಟ್ರೋ ಸಿಬ್ಬಂದಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕೂಡ ಟಿಕೆಟ್ ಖರೀದಿಸಿ ಪ್ರಯಾಣ ನಡೆಸಬೇಕು ಎಂದು ಹೇಳಿದ್ದರು.
ಯಾವುದೇ ಅನೌನ್ಸ್ ಮೆಂಟ್ ಆಗಿಲ್ಲ
ಮಾಧ್ಯಮ ವರದಿಗಳನ್ನು ಆಧರಿಸಿ ಪಕ್ಷವೇ ಶ್ರೀಧರನ್ ಅವರನ್ನು ಕೇರಳ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದೆ ಎಂದು ಟ್ವೀಟ್ ಮಾಡಿದ್ದೆ. ನಂತರ ನಾನು ಈ ಬಗ್ಗೆ ಗ್ರಾಸ್ ಚೆಕ್ ಮಾಡಿದ್ದು, ಪಕ್ಷದ ಮುಖ್ಯಮಸ್ಥರ ಬಳಿ ಮಾತನಾಡಿದೆ. ಅವರು ಈ ಬಗ್ಗೆ ಯಾವುದೇ ರೀತಿಯ ಘೋಷಣೆ ಮಾಡಿಲ್ಲ ಎಂದು ಹೇಳಿದರು ಎಂದು ಮುರಳೀಧರನ್ ಸ್ಪಷ್ಟಪಡಿಸಿದ್ದಾರೆ.