– ತಪ್ಪಿತು ಉಗ್ರರ ದಾಳಿ
ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ 11 ಕಡೆ ದಾಳಿ ಮಾಡಿ 9 ಜನ ಉಗ್ರರನ್ನು ಇಂದು ಬಂಧಿಸಿದ್ದಾರೆ.
ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದ 9 ಮಂದಿ ಉಗ್ರರನ್ನು ಎನ್ಐಎ ಅರೆಸ್ಟ್ ಮಾಡಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಿಂದ ಒಂಬತ್ತು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಆರು ಮಂದಿಯನ್ನು ಪಶ್ಚಿಮ ಬಂಗಾಳದಿಂದ ಬಂಧಿಸಲಾಗಿದ್ದು, ಉಳಿದ ಮೂವರನ್ನು ಕೇರಳದಿಂದ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭಿಸಿದೆ.
Advertisement
Advertisement
ಬಂಧಿತ ಭಯೋತ್ಪಾದಕರನ್ನು ಕೇರಳದ ಎರ್ನಾಕುಲಂ ಮೂಲದವರಾದ ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್, ಮೊಸರಾಫ್ ಹುಸೈನ್ ಮತ್ತು ಪಶ್ಚಿಮಾ ಬಂಗಾಳದ ಮುರ್ಷಿದಾಬಾದ್ ಮೂಲಕದ ನಜ್ಮಸ್ ಸಕೀಬ್, ಅಬು ಸುಫಿಯಾನ್, ಮೈನುಲ್ ಮೊಂಡಾಲ್, ಲ್ಯುಯೆನ್ ಅಹ್ಮದ್, ಅಲ್ ಮಾಮುನ್ ಕಮಲ್ ಮತ್ತು ಅತಿತೂರ್ ರೆಹಮಾನ್ ಎಂದು ಗುರುತಿಸಲಾಗಿದೆ.
Advertisement
Leu Yean Ahmed and Abu Sufiyan from West Bengal and Mosaraf Hossen & Murshid Hasan from Kerala are among the nine Al-Qaeda terrorists arrested by National Investigation Agency (NIA) pic.twitter.com/jMnRjTIjED
— ANI (@ANI) September 19, 2020
Advertisement
ಈ ವಿಚಾರವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಎನ್ಐಎ, ಪ್ರಾಥಮಿಕ ತನಿಖೆಯ ಪ್ರಕಾರ, ಈ ವ್ಯಕ್ತಿಗಳನ್ನು ಪಾಕಿಸ್ತಾನ ಮೂಲದ ಅಲ್-ಖೈದಾ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕರು ಎಂದು ತಿಳಿದು ಬಂದಿದೆ. ಇವರನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರೇರೇಪಿಸಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್ಐಎ ತಿಳಿಸಿದೆ.
9 Al-Qaeda operatives arrested by NIA, in raids conducted at multiple locations in Murshidabad, West Bengal and Ernakulam, Kerala https://t.co/iSjTGukEbw
— ANI (@ANI) September 19, 2020
ಈ ಭಯೋತ್ಪಾದಕರ ಸಂಘ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಹಣವನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿತ್ತು. ಇದರಲ್ಲಿ ಕೆಲ ಉಗ್ರರು ಹಣ ಬಂದ ನಂತರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ದೆಹಲಿಗೆ ಪ್ರಯಾಣಿಸಲು ಯೋಜನೆ ರೂಪಿಸಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ದೇಶದ ವಿವಿಧ ಭಾಗಗಳಲ್ಲಿ ಇವರನ್ನು ಬಂಧಿಸಿದ್ದು, ದೇಶದಲ್ಲಿ ನಡೆಯಬೇಕಿದ್ದ ಹಲವಾರು ಭಯೋತ್ಪಾದಕ ದಾಳಿಗಳು ನಿಂತು ಹೋಗಿವೆ ಎಂದು ಎನ್ಐಎ ಹೇಳಿದೆ.
A large quantity of incriminating materials incl digital devices, documents, jihadi literature, sharp weapons, country-made firearms, a locally fabricated body armour, articles and literature used for making home-made explosive devices have been seized from their possession: NIA
— ANI (@ANI) September 19, 2020
ಬಂಧಿತರಿಂದ ಡಿಜಿಟಲ್ ಸಾಧನಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ತೀಕ್ಷ್ಣವಾದ ಶಸ್ತ್ರಾಸ್ತ್ರಗಳು, ದೇಶೀಯ ನಿರ್ಮಿತ ಬಂದೂಕುಗಳು, ಸ್ಥಳೀಯವಾಗಿ ತಯಾರಿಸಿದ ದೇಹದ ರಕ್ಷಾಕವಚ, ಮನೆಯಲ್ಲಿ ತಯಾರಿಸಿದ ಸ್ಫೋಟಕ ಸಾಧನಗಳು, ತಯಾರಿಸಲು ಬಳಸುವ ಪುಸ್ತಕಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಮಾಹಿತಿ ನೀಡಿದೆ.