ಬೆಂಗಳೂರು: ಕೇಕ್ ಮುಂತಾದವುಗಳನ್ನು ತರುವ ಹಣದಲ್ಲಿ ಅಗತ್ಯ ಇರುವವರಿಗೆ ಮಾಸ್ಕ್ ಹಾಗೂ ನ್ಯಾನಿಟೈಸರ್ ಗಳನ್ನು ಹಂಚಿ. ಈ ಮೂಲಕ ನನ್ನ ಜನ್ಮದಿನಕ್ಕೆ ಶುಭಕೋರಿ ಎಂದು ಅಭಿಮಾನಿಗಳಲ್ಲಿ ಸಂಸದ ಬಿ. ಎನ್ ಬಚ್ಚೇಗೌಡ ಮನವಿ ಮಾಡಿಕೊಂಡಿದ್ದಾರೆ.
ಆತ್ಮೀಯರೆ,
ನಾಳೆ ದಿ. 01 ಅಕ್ಟೋಬರ್ 2020 ನನ್ನ ಜನ್ಮ ದಿನವಾಗಿದ್ದು, ಕೊರೋನ ಸಂಕಷ್ಟದ ಈ ಸಮಯದಲ್ಲಿ ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳದಿರಲು ನಿರ್ಧರಿಸಿದ್ದೇನೆ.
ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಸಂಬ್ರಮಾಚರಣೆ ಇರುವುದಿಲ್ಲ ಹಾಗೂ ವೈಯಕ್ತಿಕ ಬೇಟಿಯೂ ಬೇಡವೆಂದು ನಿರ್ಧರಿಸಿದ್ದು ತಾವುಗಳು ಸಹಕರಿಸಬೇಕೆಂದು ತಮ್ಮಲ್ಲಿ ಮನವಿ. pic.twitter.com/eDXmMfLrkt
— B.N. Bache Gowda (@BNBachegowda_MP) September 30, 2020
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾಳೆ ಅಂದರೆ ಅಕ್ಟೋಬರ್ 01 ರಂದು ನನ್ನ ಜನ್ಮ ದಿನವಾಗಿದ್ದು, ಕೊರೊನಾ ಸಂಕಷ್ಟದ ಈ ಸಮಯದಲ್ಲಿ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳದಿರಲು ನಿರ್ಧರಿಸಿದ್ದೇನೆ. ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಸಂಭ್ರಮಾಚರಣೆ ಇರುವುದಿಲ್ಲ ಹಾಗೂ ವೈಯಕ್ತಿಕ ಭೇಟಿಯೂ ಬೇಡವೆಂದು ನಿರ್ಧರಿಸಿದ್ದು, ತಾವುಗಳು ಸಹಕರಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ.
Advertisement
Advertisement
ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದ್ದು, ಈ ವರ್ಷ ತಾವು ಮನೆಯಿಂದಲೇ ಹರಸಿ ಆಶೀರ್ವದಿಸಬೇಕಾಗಿ ಕಳಕಳಿಯ ಮನವಿ. ಹಾಗೆಯೇ ಕೇಕು ಮುಂತಾದವುಗಳನ್ನು ತರುವ ಬದಲು ಅದೇ ಹಣದಲ್ಲಿ ಅಗತ್ಯವಿರುವವರಿಗೆ ಮಾಸ್ಕ್, ಸಾನಿಟೈಸರ್ ವಿತರಿಸುವ ಮೂಲಕ ನನಗೆ ಶುಭಕೋರಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
Advertisement
ಕೊರೊನಾ ವೈರಸ್ ಹೆಚ್ಚಾಗಿ ಹರಡುತ್ತಿದ್ದು, ಈ ವರ್ಷ ತಾವು ಮನೆಯಿಂದಲೇ ಹರಸಿ ಆಶೀರ್ವಾದಿಸಬೇಕಾಗಿ ಕಳಕಳಿಯ ಮನವಿ.
ಹಾಗೆ, ಕೇಕು ಮುಂತಾದವುಗಳನ್ನು ತರುವ ಬದಲು ಅದೇ ಹಣದಲ್ಲಿ ಅಗತ್ಯವಿರುವವರಿಗೆ ಮಾಸ್ಕ್, ಸಾನಿಟೈಜರ್ ವಿತರಿಸುವ ಮೂಲಕ ನನಗೆ ಶುಭಕೋರಬೇಕಾಗಿ ವಿನಂತಿ ????.
— B.N. Bache Gowda (@BNBachegowda_MP) September 30, 2020
ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬಚ್ಚೇಗೌಡರ ಪುತ್ರ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇತ್ತ ಕಾಂಗ್ರೆಸ್ ತೊರೆದು ಕಮಲ ಹಿಡಿದಿದ್ದ ಎಂಟಿಬಿ ನಾಗರಾಜ್ ಬಿಜೆಪಿ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್ ನಿಂದ ಪದ್ಮಾವತಿ ಸುರೇಶ್ ಕಣದಲ್ಲಿದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಸ್ವಾಭಿಮಾನ ಮಂತ್ರ ಜಪಿಸಿದ್ದ ಶರತ್ ಬಚ್ಚೇಗೌಡ ಗೆಲುವಿನ ನಗೆ ಬೀರಿದ್ದರು. ತಮ್ಮ ಸೋಲಿಗೆ ಸಂಸದ ಬಿ.ಎನ್.ಬಚ್ಚೇಗೌಡ ಕಾರಣ. ಪರೋಕ್ಷವಾಗಿ ಮಗನಿಗೆ ಉಪಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ ಎಂದು ಸೋತ ಎಂಟಿಬಿ ಆರೋಪಿಸಿದ್ದರು. ಸದ್ಯ ಎಂಟಿವಿ ವಿಧಾನಪರಿಷತ್ ಗೆ ಎಂಟ್ರಿ ನೀಡಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.