ಕೊಪ್ಪಳ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಕೇಂದ್ರದ ನಾಯಕರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮನವೊಲಿಸಿ ಅವರು ಹೆಚ್ಚು ಹಣ ತರುತ್ತಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
Advertisement
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕಬಡ್ಡಿ ತಂಡದ ಕ್ಯಾಪ್ಟನ್. ಹೀಗಾಗಿ ಅವರಿಗೆ ಕ್ಯಾಚ್ ಹಾಕೋದು ಗೊತ್ತು, ರೈಡ್ ಮಾಡೋದು ಗೊತ್ತು. ಯಡಿಯೂರಪ್ಪ ರಾಜಾಹುಲಿ ಅಂತ ನಾನು ಯಾವಾಗ್ಲೋ ಹೇಳಿದ್ದೀನಿ. ಅವರು ಒಂದ ತರಹ ಕಬಡ್ಡಿ ಟೀಂ ಕ್ಯಾಪ್ಟನ್ ಎಂದರು.
Advertisement
Advertisement
ನಮ್ಮ ಕರ್ನಾಟಕ ಹಣಕಾಸಿನ ವಿಷಯದಲ್ಲಿ ಇಡೀ ದೇಶದಲ್ಲಿ ಮಾದರಿಯಾಗಿರುತ್ತೆ. ಇಂದು ಯಡಿಯೂರಪ್ಪ ಕೇಂದ್ರ ಸರ್ಕಾರವನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ಮನವೊಲಿಸಿ ಹೆಚ್ಚು ಹಣ ತರ್ತಾರೆ ಎಂದು ತಿಳಿಸಿದರು.
Advertisement
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಮುಂದಿನ ಮೂರು ವರ್ಷ ಯಡಿಯೂರಪ್ಪರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದ್ದಾರೆ.