ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ವಿವಾದಿತ ಕೃಷಿ ಮಸೂದೆಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದಿನ ಕಲಾಪದ ಚರ್ಚೆಯಲ್ಲಿ ಮಾತನಾಡಿದ ಅವರು ರೈತನ ಮಗನಾಗಿ ನಾನು ಈ ಮಸೂದೆಯನ್ನು ವಿರೋಧಿಸುತ್ತೇನೆ. ರೈತರ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳಿಗೆ ಕಾಳಜಿ ಇದೆ. ಆದರೆ ಕೇಂದ್ರ ಸರ್ಕಾರ ಈ ನಡೆ ಆತುರ ನಿರ್ಧಾರ ಈ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
PM should explain why there's a hurry to pass the bills amid pandemic. He should explain what would farm bills do for farming community in short & long term & how it will help in achieving govt's goal of doubling farmers' income: Former PM & JD(S) MP HD Devegowda in Rajya Sabha pic.twitter.com/SLZVwmEbki
— ANI (@ANI) September 20, 2020
Advertisement
ಕಲಾಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತು ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರ ಮಾಡಿದೆ ಇಂದೇ ರೈತರಿಗೆ ಸಂಬಂಧಪಟ್ಟಂತೆ ಮೂರು ಮಸೂದೆ ಗಳು ಮಂಡನೆಯಾದವು ನನ್ನ ನಿಲುವು ಯಾವಾಗಲೂ ರೈತರ ಪರ ಎಂದರು.
Advertisement
Advertisement
ಇವತ್ತು ನನಗೆ ಮೂರು ನಿಮಿಷ ಮಾತಾಡೋಕೆ ಅವಕಾಶ ಸಿಕ್ಕಿತ್ತು. ಆದರೆ ಈ ಬಿಲ್ನ ಒಳಹೊಕ್ಕಿ ನೋಡಿದರೆ ರೈತರ ಶೋಷಣೆಯೇ ಜಾಸ್ತಿ. ಹೀಗಾಗೀ ಹೆಚ್ಚಿನ ಸಮಯ ಮಾತನಾಡಲು ಬೇಕಿತ್ತು. ಆದರೆ ಅವಕಾಶ ಸಿಗಲಿಲ್ಲ. ಈ ಬಿಲ್ಗೆ ನನ್ನ ವಿರೋಧವಿದೆ. ರೈತರಿಗೆ ಇದರಿಂದ ಯಾವುದೇ ಒಳಿತಿಲ್ಲ, ನೀತಿ ಆಯೋಗ ನೀಡಿರುವ ವರದಿಯನ್ನೇ ಮೋದಿ ಸರ್ಕಾರ ಒಪ್ಪುತ್ತಿಲ್ಲ. ರೈತರ ವಿರೋಧಿ ಮಸೂದೆಯನ್ನು ಜಾರಿಗೆ ತರಲು ಕೇಂದ್ರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.