– ಎನ್ಡಿಎ ಮೈತ್ರಿಕೂಟಕ್ಕೆ ಶಿರೋಮಣಿ ಅಕಾಲಿದಳ ಬಿಗ್ ಶಾಕ್
ನವದೆಹಲಿ: ಎನ್ಡಿಎ ಮೈತ್ರಿಕೂಟಕ್ಕೆ ಅಂಗ ಪಕ್ಷ ಶಿರೋಮಣಿ ಅಕಾಲಿದಳ ಬಿಗ್ ಶಾಕ್ ನೀಡಿದೆ. ಬಿಜೆಪಿ ರೈತ ವಿರೋಧಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಕೌರ್, ರೈತ ವಿರೋಧಿ ಸುಗ್ರೀವಾಜ್ಞೆ ಮತ್ತು ಬಿಲ್ಲನ್ನು ವಿರೋಧಿಸಿ ನಾನು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರೊಂದಿಗೆ ಅವರ ಮಗಳಗಾಗಿ, ಸಹೋದರಿಯಾಗಿ ನಿಲ್ಲುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.
Advertisement
I have resigned from Union Cabinet in protest against anti-farmer ordinances and legislation. Proud to stand with farmers as their daughter & sister.
— Harsimrat Kaur Badal (@HarsimratBadal_) September 17, 2020
Advertisement
ರೈತರು ಮತ್ತು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ತಿದ್ದುಪಡಿ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಕೌರ್ ರಾಜೀನಾಮೆ ನೀಡಿದ್ದು, ವೋಟಿಂಗ್ಗೆ ಮುಂಚೆ ಕೇಂದ್ರ ಸರ್ಕಾರ ಮುಜುಗರ ಅನುಭವಿಸಿತು. ಈ ಬಿಲ್ಗೆ ವಿರುದ್ಧವಾಗಿ ಅಕಾಲಿದಳ ಮತ ಹಾಕಿತ್ತು.
Advertisement
Shiromani Akali Dal strongly opposes the #AgricultureBill: SAD President Sukhbir Singh Badal in Lok Sabha pic.twitter.com/vN3uoyS03b
— ANI (@ANI) September 17, 2020
Advertisement
ಸಂಸತ್ನಲ್ಲಿ ಮಾತನಾಡಿದ ಕೌರ್ ಪತಿ ಸುಖ್ಬೀರ್ ಸಿಂಗ್ ಬಾದಲ್, ಈ ಮಸೂದೆ ನಮ್ಮ ವಿರೋಧವಿದೆ. ರೈತ ವಿರೋಧಿ ರಾಜಕೀಯಕ್ಕೆ ನಮ್ಮ ವಿರೋಧವಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ತರುತ್ತಿರುವ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಪ್ರತಿಭಟನೆಗಳು ನಡೆಯುತ್ತಿವೆ.